ಕರ್ನಾಟಕ ಕಲ್ಚರಲ್ ಫೌಂಡೇಶನ್: ವಾರ್ಷಿಕ ಕೌನ್ಸಿಲ್

Update: 2018-06-03 17:35 GMT

ಸೌದಿ ಅರೇಬಿಯಾ, ಜೂ. 3: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಇದರ ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ಮದೀನಾ ಮುನವ್ವರದಲ್ಲಿ ಶುಕ್ರವಾರ ನೆಡೆಯಿತು.

ಕೆಸಿಎಫ್ ಸೌದಿ ರಾಷ್ಟ್ರೀಯ ಅಧ್ಯಕ್ಷ  ಯೂಸುಫ್ ಸಖಾಫಿ ಬೈತಾರ್ ಅಧ್ಯಕ್ಷತೆಯಲ್ಲಿ  ಜರಗಿದ ಸಭೆಯನ್ನು ಹನೀಫ್ ಸಖಾಫಿ ಸಾಲತ್ತೂರ್ ಖಿರಾಅತ್ ಪಠಿಸಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷ  ಸಿದ್ದೀಕ್ ಸಖಾಫಿ ಪೆರುವಾಯಿ ಕಾರ್ಯಕ್ರಮ ಉದ್ಘಾಟಿಸಿದರು. 

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ವಾರ್ಷಿಕ ವರದಿ ವಾಚಿಸಿದರು. ಕೆಸಿಎಫ್  ರಾಷ್ಟ್ರೀಯ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಲೆಕ್ಕಪತ್ರ ಮಂಡಿಸಿದರು. ಕೆಸಿಎಫ್ ಸದಸ್ಯರ ಕ್ಷೇಮಕ್ಕಾಗಿ ಸ್ಥಾಪಿಸಿದ ಎಮ್ ಆರ್ ಎಫ್ ( ಸದಸ್ಯರ ಸಹಾಯ ಫಂಡ್ ) ನಿಂದ ಸುಮಾರು 14 ಲಕ್ಷದಷ್ಟು ರೂಪಾಯಿಗಳ ಸಹಾಯ ನೀಡಿದ ವಿವರವನ್ನು ಸಭೆಯಲ್ಲಿ ಮಂಡಿಸಲಾಯಿತು ಮತ್ತು ಮುಂದಿನ ವರ್ಷಕ್ಕೂ ಎಮ್ ಆರ್ ಅಫ್ ನ್ನು ವಿಸ್ತರಿಸುವ ಯೋಜನೆಯನ್ನು ಸಾಂತ್ವನ ವಿಭಾಗಕ್ಕೆ ವಹಿಸಿಕೊಡಲಾಯಿತು.

2018ನೇ ಸಾಲಿನ ಹಜ್ಜ್ ನ ಸ್ವಯಃ ಸೇವಕರನ್ನು ಸೇವೆಗಿಳಿಸುವ ಹೊಣೆಯನ್ನು ವಹಿಸಿಕೊಡಲು  ಹಜ್ಜ್ ವಾಲೇಂಟಿಯರ್ ಕೋರ್ ನ ನೂತನ ಸಮಿತಿ ಯನ್ನು  ರಚಿಸಲಾಯಿತು.  ವಾರ್ಷಿಕ ಕೌನ್ಸಿಲ್ ಸಭೆಗೆ  ರಿಯಾದ್, ಜಿದ್ದಾ, ದಮಾಮ್, ಗಸೀಂ ಹಾಗೂ ಮದೀನಾ ಝೋನ್ ನ ರಾಷ್ಟ್ರೀಯ ಕೌನ್ಸಲರ್ ಗಳು ಭಾಗವಹಿಸಿದ್ದರು.

ಸಭೆಗೆ ಆಗಮಿಸಿದ ಕೌನ್ಸಿಲರ್ ಗಳಿಗೆ ಕೆಸಿಎಫ್ ಮದೀನಾ ಸೆಕ್ಟರ್ ಹಾಗೂ ಝೋನ್ ವತಿಯಿಂದ  ಇಫ್ತಾರ್ ಕೂಟ ಏರ್ಪಾಡು ಮಾಡಲಾಯಿತು. ಸಭೆಯ ಆರಂಭದಲ್ಲಿ  ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ  ಫಾರೂಕ್ ನಈಮಿ ಸ್ವಾಗತಿಸಿ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಹಣಕಾಸು ನಿರ್ವಹಣೆಗೆ ನೂತನ ವಾಗಿ ನೇಮಕವಾದ ಹಿದಾಯತ್ ತೀರ್ಥಹಳ್ಳಿ  ಕೊನೆಯಲ್ಲಿ ವಂದಿಸಿದರು.

Writer - ವರದಿ: ಹಕೀಂ ಬೋಳಾರ್ ಮದೀನಾ

contributor

Editor - ವರದಿ: ಹಕೀಂ ಬೋಳಾರ್ ಮದೀನಾ

contributor

Similar News