ಅಬುಧಾಬಿಯಲ್ಲಿ 18 ಕೋಟಿ ರೂ. ಗೆದ್ದ ಭಾರತೀಯ

Update: 2018-06-03 17:36 GMT

ಅಬುಧಾಬಿ, ಜೂ. 3: ನೈಜೀರಿಯದಲ್ಲಿ ವಾಸಿಸುವ ಭಾರತೀಯ ಪ್ರಜೆಯೊಬ್ಬರು ಅಬುಧಾಬಿಯ 10 ಮಿಲಿಯ ದಿರ್ಹಮ್ (ಸುಮಾರು 18 ಕೋಟಿ ರೂಪಾಯಿ) ಲಾಟರಿ ಗೆದ್ದಿದ್ದಾರೆ.

ಲಾಟರಿಯ ಫಲಿತಾಂಶವನ್ನು ರವಿವಾರ ಪ್ರಕಟಿಸಲಾಯಿತು. ಇತರ ಒಂಬತ್ತು ಬಹುಮಾನಗಳನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಈ ಬಹುಮಾನಗಳು 10,000 ದಿರ್ಹಮ್ (ಸುಮಾರು 1.8 ಲಕ್ಷ ರೂಪಾಯಿ)ನಿಂದ 1 ಲಕ್ಷ ದಿರ್ಹಮ್ (ಸುಮಾರು 18.20 ಲಕ್ಷ ರೂಪಾಯಿ)ಗಳ ವರೆಗಿನ ನಗದು ಮೊತ್ತಗಳನ್ನು ಹೊಂದಿವೆ.

ಈ ಬಹುಮಾನಗಳನ್ನು ಐವರು ಭಾರತೀಯರು, ಮೂವರು ಪಾಕಿಸ್ತಾನೀಯರು ಮತ್ತು ಓರ್ವ ಯುಎಇ ಪ್ರಜೆ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News