ಯುಎಇಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ

Update: 2018-06-07 15:58 GMT

ದುಬೈ, ಜೂ. 7: ಯುಎಇಯಲ್ಲಿರುವ ಭಾರತೀಯ ರೈತರೊಬ್ಬರು ಶಾರ್ಜಾದಲ್ಲಿ ಗರಿಷ್ಠ ಸಂಖ್ಯೆಯ ಕರಿಬೇವು ಸೊಪ್ಪಿನ ಗಿಡಗಳನ್ನು ವಿತರಿಸುವ ಮೂಲಕ ಗಿನ್ನೆಸ್ ಜಾಗತಿಕ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ಕೇರಳದ ಸುದೀಶ್ ಗುರುವಾಯೂರ್ ಮಂಗಳವಾರ 4,914 ಕರಿಬೇವು ಸೊಪ್ಪಿನ ಗಿಡಗಳನ್ನು ವಿತರಿಸುವ ಮೂಲಕ, ದುಬೈಯಲ್ಲಿರುವ ಗುರು ನಾನಕ್ ದರ್ಬಾರ್ ಗುರುದ್ವಾರ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಗುರುದ್ವಾರವು ಮಾರ್ಚ್‌ನಲ್ಲಿ ದುಬೈನಲ್ಲಿರುವ ಡೆಲ್ಲಿ ಪ್ರೈವೇಟ್ ಶಾಲೆಯ ವಿದ್ಯಾರ್ಥಿಗಳಿಗೆ ಮೂರು ವಿಧಗಳ 2,083 ಕರಿಬೇವಿನ ಸೊಪ್ಪಿನ ಗಿಡಗಳನ್ನು ವಿತರಿಸಿತ್ತು.

ಯುಎಇಯಲ್ಲಿ ಕೃಷಿಯಲ್ಲಿ ಸಾಧನೆಗಳನ್ನು ಮಾಡುವ ಮೂಲಕ ಗಮನ ಸೆಳೆದಿರುವ ಗುರುವಾಯೂರ್, ಯುಎಇಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.

ಶಾರ್ಜಾದಲ್ಲಿರುವ ತನ್ನದೇ ಆದ ತೋಟದಲ್ಲಿ ಬೆಳೆಸಿದ ಗಿಡಗಳನ್ನು ಶಾರ್ಜಾ ಇಂಡಿಯನ್ ಹೈಸ್ಕೂಲ್‌ನ ಎರಡು ಕ್ಯಾಂಪಸ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News