ಅಂತಾರಾಷ್ಟ್ರೀಯ ಖುರ್ ಆನ್ ಪಾರಾಯಣ ಸ್ಪರ್ಧೆ: ಕನ್ನಡಿಗ ದರ್ವೇಶ್ ಮುಹಮ್ಮದ್ ಅಲಿ ಪ್ರಥಮ

Update: 2018-06-09 17:55 GMT

ಬಹರೈನ್, ಜೂ. 9: ಬಹರೈನ್ ನಲ್ಲಿ ನಡೆದ 'ಕಿಂಗ್ ಅಹ್ಮದ್ ಬಿನ್ ಇಸಾ ಅಲ್ ಖಲೀಫಾ ಖುರಾನ್ ಪಠಣ' ಸ್ಪರ್ಧೆಯಲ್ಲಿ ಭಾರತದ ದರ್ವೇಶ್ ಮುಹಮ್ಮದ್ ಅಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ರಮಝಾನ್ ತಿಂಗಳಲ್ಲಿ ಬಹರೈನ್ ನ ವಿವಿಧ ಮಸೀದಿಗಳಲ್ಲಿ ಖುರ್ ಆನ್ ಪಾರಾಯಣ ಮಾಡಿ ರಾತ್ರಿಯ ವಿಶೇಷ ಪ್ರಾರ್ಥನೆಗಳಿಗೆ ಧರ್ವೇಶ್ ಮುಹಮ್ಮದ್ ಅಲಿ ನೇತೃತ್ವ ವಹಿಸುತ್ತಾರೆ. ಧರ್ವೇಶ್ 13ನೇ ವಯಸ್ಸಿನಿಂದ ಬಹರೈನ್ ನ ಹಲವು ಮಸೀದಿಗಳಲ್ಲಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದು, ಸದ್ಯ ಬಹರೈನ್ ರಾಜ್ಯದ 11ಮಸೀದಿಗಳಲ್ಲಿ  ತರಾವೀಹ್  ನಮಾಝಿಗೆ ನೇತೃತ್ವ ವಹಿಸುತ್ತಿದ್ದಾರೆ.

2008 ರಲ್ಲೇ ಸ್ಪರ್ಧಾ ಕಣಕ್ಕೆ ಲಗ್ಗೆಯಿಟ್ಟ ದರ್ವೇಶ್ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮುಂತಾದ ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನವನ್ನಲಂಕರಿಸುತ್ತಾ ಬಂದು 2018ರಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. 

ಬಹರೈನ್ ರಾಜ್ಯದ 500 ಅರಬಿ ಹಾಫಿಳ್ ಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಅದರಲ್ಲಿ ಕನ್ನಡಿಗ ದರ್ವೇಶ್ ಮುಹಮ್ಮದ್ ಅಲಿ ಜಯಗಳಿಸಿದ್ದು,  ತನ್ನೆಲ್ಲಾ ಸಾಧನೆಗಳ ಹಿಂದೆ ತಂದೆ ತಾಯಿಯ ಗುರುಹಿರಿಯರ ಪ್ರೋತ್ಸಾಹವಿದ್ದು, ಇದೇ ಹಾದಿಯಲ್ಲಿ ಮುಂದುವರೆಯುತ್ತೇನೆ ಎಂದು  ದರ್ವೇಶ್ ಹೇಳಿದ್ದಾರೆ.

ಕೊಡಗು ಸ್ವದೇಶಿ ಅಲ್ ಹಾಜ್ ಮುಹಮ್ಮದಾಲಿ ಮುಸ್ಲಿಯಾರ್ ಹಾಗೂ ಸಫಿಯಾ ಹಜ್ಜುಮ್ಮ ದಂಪತಿಯ ಏಳು ಮಕ್ಕಳಲ್ಲಿ ಆರನೇಯ ಪುತ್ರನಾಗಿ 2002 ರಲ್ಲಿ ಬಹ್ರೈನ್'ನಲ್ಲಿ ದರ್ವೇಶ್ ಜನಿಸಿದ್ದರು. ಆರಂಭದಲ್ಲಿ ಇಂಡಿಯನ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ್ದು, ಬಹರೈನ್ ನ ಅಲ್ ಮಹದ್ ರಿಲೇಜೆಸ್ ಅರೇಬಿಕ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾರೆ.

ಸಂಜೆ ಬಳಿಕ ಮರ್ಕಝ್ ಅಬ್ದುಲ್ಲಾ ಬಿನ್ ಅಬ್ಬಾಸ್ ಎಂಬ ಸಂಸ್ಥೆ ಯಲ್ಲಿ ಖುರಾನ್ ಹಿಫ್ಳ್ ಅಭ್ಯಾಸ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಈಜಿಪ್ಟಿನ ಅಲ್ ಅಝ್ಹರಿ ಕಾಲೇಜಿನಲ್ಲಿ ಉನ್ನತ ವಿಧ್ಯಾಭ್ಯಾಸ ನಡೆಸುವ ಆಕಾಂಕ್ಷೆ ಹೊಂದಿದ್ದಾರೆ. ದರ್ವೇಶ್ ಅರಬಿ, ಇಂಗ್ಲಿಷ್, ಕನ್ನಡ, ತಮಿಲು, ಮಲಯಾಳಂ, ಹಿಂದಿ, ಪಂಜಾಬಿ ಭಾಷೆಗಳಲ್ಲಿ ಹಾಡುತ್ತಿದ್ದ ದರ್ವೇಶ್ ತನ್ನ ಆರನೇ ವರ್ಷ ಪ್ರಾಯದಿಂದಲೇ ವಿವಿಧ ಸ್ಪರ್ಧಾ ವೇದಿಕೆಗಳಲ್ಲಿ ಮಿಂಚಲಾರಂಭಿಸಿದ್ದರು.

Writer - ವರದಿ: ಹಕೀಂ ಮದೀನಾ

contributor

Editor - ವರದಿ: ಹಕೀಂ ಮದೀನಾ

contributor

Similar News