ಯುಎಇಯಲ್ಲಿರುವ ಅನಿವಾಸಿ ಭಾರತೀಯರೇ, ಈ ಸಂಸ್ಥೆಗಳ ಮೂಲಕ ತಾಯ್ನಾಡಿಗೆ ಹಣ ಕಳುಹಿಸಬೇಡಿ

Update: 2018-06-11 15:21 GMT

ದುಬೈ, ಜೂ. 11: ನಿಯಮಗಳ ಉಲ್ಲಂಘನೆಗಾಗಿ ಯುಎಇಯ ಸೆಂಟ್ರಲ್ ಬ್ಯಾಂಕ್ ಸೋಮವಾರ ಹಲವು ಕರೆನ್ಸಿ ವಿನಿಮಯ ಸಂಸ್ಥೆಗಳ ಪರವಾನಿಗೆಗಳನ್ನು ಕೆಳ ದರ್ಜೆಗಿಳಿಸಿದೆ ಹಾಗೂ ಇಂಥ ವಿನಿಮಯ ಸಂಸ್ಥೆಗಳ ಮೂಲಕ ಹಣ ಕಳುಹಿಸದಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

Taher Exchange Est., Al Hadha Exchange, Al Hemriya Exchange, Dubai Express Exchange, Sanaa Exchange, Cosmos Exchange ಹಾಗು Bin Bakheet Exchange Est ಯ ಲೈಸೆನ್ಸ್ ಗಳನ್ನು ಬ್ಯಾಂಕ್ ಕೆಳಗಿನ ದರ್ಜೆಗೆ ಇಳಿಸಿದೆ.

‘‘ಹಣ ಕಳುಹಿಸುವುದು ಅಥವಾ ವೇತನ ಪಾವತಿ ಸೇರಿದಂತೆ ಯಾವುದೇ ರೀತಿಯ ಹಣಕಾಸು ಚಟುವಟಿಕೆಗಳನ್ನು ನಡೆಸುವುದರಿಂದ ಈ ವಿನಿಮಯ ಸಂಸ್ಥೆಗಳನ್ನು ನಿಷೇಧಿಸಲಾಗಿದೆ. ಸೆಂಟ್ರಲ್ ಬ್ಯಾಂಕ್ ನೀಡಿದ ಗ್ರೇಸ್ ಅವಧಿಯಲ್ಲೂ ತಮ್ಮ ಕಾರ್ಯಚಟುವಟಿಕೆಯ ವಿವರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈ ಕಂಪೆನಿಗಳ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.

ಈ 7 ವಿನಿಮಯ ಕಂಪೆನಿಗಳ ಮೂಲಕ ಹಣ ಕಳುಹಿಸುವುದು ಮತ್ತು ವೇತನ ಪಾವತಿ ಮಾಡದಂತೆ ಸೆಂಟ್ರಲ್ ಬ್ಯಾಂಕ್ ಯುಎಇ ನಿವಾಸಿಗಳನ್ನು ಎಚ್ಚರಿಸಿದೆ. ಆದಾಗ್ಯೂ, ಈ ಕಂಪೆನಿಗಳು ವಿದೇಶಿ ಕರೆನ್ಸಿಗಳ ಮಾರಾಟ ಮತ್ತು ಖರೀದಿಯನ್ನು ಹಾಗೂ ಟ್ರಾವೆಲರ್ಸ್‌ ಚೆಕ್‌ಗಳನ್ನು ನಿಭಾಯಿಸುವುದನ್ನು ಮುಂದುವರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News