ಯುಎಇಯಲ್ಲಿ ಈದುಲ್ ಫಿತ್ರ್ ನಮಾಝ್ ವೇಳಾಪಟ್ಟಿ

Update: 2018-06-13 16:33 GMT

ದುಬೈ, ಜೂ. 13: ಈದುಲ್ ಫಿತ್ರನ್ನು ಯಾವಾಗ ಆಚರಿಸಬೇಕು ಎನ್ನುವುದನ್ನು ಘೋಷಿಸಲು ಸೌದಿ ಅರೇಬಿಯ ಮತ್ತು ಯುಎಇಗಳ ಚಂದ್ರದರ್ಶನ ಸಮಿತಿಗಳು ಗುರುವಾರ ಸಂಜೆ ಸಭೆ ಸೇರಲಿವೆ.

ಈದುಲ್ ಫಿತ್ರ್ ಪ್ರಾರ್ಥನೆಗಳ ಸಮಯಗಳನ್ನು ಘೋಷಿಸಲಾಗಿದೆ.

ಈದ್ ಪ್ರಾರ್ಥನೆಯ ಸಮಯ ಈ ರೀತಿ ಇದೆ: ಅಬುಧಾಬಿಯಲ್ಲಿ ಮುಂಜಾನೆ 5:50, ಅಲ್ ಐನ್‌ನಲ್ಲಿ ಮುಂಜಾನೆ 5:57, ವೆಸ್ಟರ್ನ್ ರೀಜನ್‌ನಲ್ಲಿ ಮುಂಜಾನೆ 6:02, ಶಾರ್ಜಾದಲ್ಲಿ ಮುಂಜಾನೆ 5:44.

ಅಲ್ ಹಮ್ರಿಯ, ಅಲ್ ಮದಮ್ ಮತ್ತು ಮಲೇಹ ಪ್ರದೇಶಗಳಲ್ಲಿ ಮುಂಜಾನೆ 5:44ಕ್ಕೆ ಪ್ರಾರ್ಥನೆ ನಡೆಯಲಿದೆ.

ಅಲ್ ದಾಯಿದ್ ನಗರ ಮತ್ತು ಅಲ್ ಬತೇಹ್‌ಗಳಲ್ಲಿ ಈದುಲ್ ಫಿತ್ರ್ ಪ್ರಾರ್ಥನೆಯು ಮುಂಜಾನೆ 5:43ಕ್ಕೆ ಹಾಗೂ ಈಸ್ಟರ್ನ್ ರೀಜನ್‌ನ ನಗರಗಳು ಮತ್ತು ಉಪನಗರಗಳಲ್ಲಿ ಪ್ರಾರ್ಥನೆಯು ಮುಂಜಾನೆ 5:41ಕ್ಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News