ದುಬೈ: 4ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಸಿದ್ಧತೆ

Update: 2018-06-13 16:35 GMT

ದುಬೈ, ಜೂ. 13: ಜೂನ್ 21 ಮತ್ತು 22ರಂದು ನಡೆಯಲಿರುವ ನಾಲ್ಕನೇ ವಾರ್ಷಿಕ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯುಎಇಯಲ್ಲಿ ಸಾವಿರಾರು ಮಂದಿ ಯೋಗ ಕಸರತ್ತುಗಳನ್ನು ನಡೆಸಲಿದ್ದಾರೆ.

ಉತ್ತರದ ಎಮಿರೇಟ್‌ಗಳಲ್ಲಿರುವ ಭಾರತೀಯ ಅಸೋಸಿಯೇಶನ್‌ಗಳ ಸಹಯೋಗದೊಂದಿಗೆ ದುಬೈಯಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯು ಯೋಗ ದಿನವನ್ನು ಆಚರಿಸಲಿದೆ ಎಂದು ಕಾನ್ಸುಲೇಟ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಯ ಪ್ರಮುಖ ಯೋಗ ಕಾರ್ಯಕ್ರಮವು ಝಬೀಲ್ ಪಾರ್ಕ್‌ನಲ್ಲಿ ನಡೆಯಲಿದೆ. ಅದೇ ವೇಳೆ, ಅಜ್ಮಾನ್, ಶಾರ್ಜಾ, ಉಮ್ಮ್ ಅಲ್ ಖುವೈನ್, ರಾಸ್ ಅಲ್ ಖೈಮಾ ಮತ್ತು ಫುಜೈರಾಗಳಲ್ಲಿ ಸಾಮೂಹಿಕ ಯೋಗ ಕಸರತ್ತುಗಳು ನಡೆಯಲಿವೆ.

ಕಾನ್ಸುಲೇಟ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಾನ್ಸುಲ್ ಜನರಲ್ ವಿಪುಲ್, ‘‘ಅಂತಾರಾಷ್ಟ್ರೀಯ ಯೋಗ ದಿನದ ಬೆಳವಣಿಗೆಯನ್ನು ಕೇವಲ ಸಂಖ್ಯೆಯ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಯೋಗದ ಪ್ರಯೋಜನಗಳ ಬಗ್ಗೆ ತಿಳುವಳಿಕೆ ಈಗ ಸಾಕಷ್ಟು ಬೆಳೆದಿದೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News