ಮಕ್ಕಾ ಮಸೀದಿಯಲ್ಲಿ 20 ಲಕ್ಷ ಮಂದಿಯಿಂದ ಪ್ರಾರ್ಥನೆ

Update: 2018-06-14 18:11 GMT

 ಮಕ್ಕಾ, ಜೂ. 14: ರಮಝಾನ್ ತಿಂಗಳ ಕೊನೆಯ ರಾತ್ರಿಯ ಕುರ್‌ಆನ್ ಪ್ರವಚನ ಕೇಳುವುದಕ್ಕಾಗಿ ಬುಧವಾರ ರಾತ್ರಿ 20 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ನಗರ ಮಕ್ಕಾದ ಮಸೀದಿಯಲ್ಲಿ ಸೇರಿದ್ದಾರೆ.

ಶೇಖ್ ಡಾ. ಅಬ್ದುಲ್ರಹ್ಮಾನ್ ಅಲ್-ಸಿದೈಸ್ ನೇತೃತ್ವದಲ್ಲಿ ಪ್ರಾರ್ಥನೆಗಳು ನಡೆದವು. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಅದೇ ವೇಳೆ, ಅಲ್ ಮದೀನಾದ ಅಲ್ ಮುನಾವರಾದಲ್ಲಿರುವ ಪ್ರವಾದಿ ಮಸೀದಿಯಲ್ಲೂ ಪವಿತ್ರ ರಾತ್ರಿಯ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಜಗತ್ತಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಿದರು.

 ಸಂಘಟಕರ ಅತ್ಯುತ್ತಮ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಉಭಯ ಪ್ರಾರ್ಥನಾಲಯಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮಗಳು ಸುಗಮವಾಗಿ ಸಾಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News