ಹುದೈದಾ ನಗರದ ಹಲವು ಭಾಗಗಳು ಮಿತ್ರಕೂಟದ ವಶಕ್ಕೆ

Update: 2018-06-14 18:43 GMT

ರಿಯಾದ್, ಜೂ. 14: ಯುಎಇ ಸಶಸ್ತ್ರ ಪಡೆಗಳ ಭೂ, ನೌಕಾ ಮತ್ತು ವಾಯು ದಾಳಿಯ ಬೆಂಬಲದೊಂದಿಗೆ, ಅರಬ್ ಮಿತ್ರಕೂಟ ಮತ್ತು ಯಮನ್ ಪಡೆಗಳು ಗುರುವಾರ ಹುದೈದಾ ನಗರ ಮತ್ತು ಅದರ ಆಯಕಟ್ಟಿನ ಬಂದರನ್ನು ಹೌದಿ ಬಂಡುಕೋರರಿಂದ ಮುಕ್ತಗೊಳಿಸಲು ನಿರ್ಣಾಯಕ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿವೆ.

ಪಡೆಗಳು ಹೌದಿ ಬಂಡುಕೋರರ ಮುಂಚೂಣಿ ನೆಲೆಗಳಿಗೆ ನುಗ್ಗಿದ ಬಳಿಕ, ಅಲ್ ದುರೈಹಿಮಿ ಜಿಲ್ಲೆಯಲ್ಲಿರುವ ನೂತನ ಆಯಕಟ್ಟಿನ ಪ್ರದೇಶಗಳು ಮತ್ತು ಹುದೈದಾ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಸ್ಥಳಗಳಿಂದ ಬಂಡುಕೋರರನ್ನು ಹೊರಗಟ್ಟಿವೆ.

ನಗರವನ್ನು ಹಿಡಿದಿಡುವ ಯತ್ನದಲ್ಲಿ ಸೋಲನುಭವಿಸಿದ ಬಳಿಕ ಹೌದಿ ಬಂಡುಕೋರರು ತಮ್ಮ ನೆಲೆಗಳನ್ನು ತೊರೆದಿದ್ದಾರೆ ಹಾಗೂ ಅವರ ಕಮಾಂಡರ್‌ಗಳು ಪಲಾಯನಗೈದಿದ್ದಾರೆ.

ಅಲ್ ಹುದೈದಾ ನಗರದತ್ತ ಯಮನಿ ಪಡೆಗಳು ನುಗ್ಗಿವೆ ಹಾಗೂ ನಗರದ ವಿಮಾನ ನಿಲ್ದಾಣದ 8 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪಿವೆ ಹಾಗೂ ದಕ್ಷಿಣ ಹುದೈದಾದ ಅಲ್ ನೆಖೈಲಾ ಮತ್ತು ಅಲ್ ತೈಫ್ ಜಿಲ್ಲೆಗಳ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ ಎಂದು ಯಮನ್ ಪಡೆಗಳ ವಕ್ತಾರ ಕರ್ನಲ್ ಸಾದಿಕ್ ಅಲ್ ದುವೈದ್ ಎಮಿರೇಟ್ಸ್ ನ್ಯೂಸ್ ಏಜನ್ಸಿಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News