ಸೌದಿ: ಉಲ್ಲಂಘನೆಗಳಿಗಾಗಿ 12.5 ಲಕ್ಷ ವಿದೇಶಿಯರ ಬಂಧನ

Update: 2018-06-19 17:59 GMT

ಜಿದ್ದಾ, ಜೂ. 19: ಸೌದಿ ಅರೇಬಿಯದಲ್ಲಿ ಹಲವು ತಿಂಗಳ ಕಾಲ ನಡೆದ ದಾಳಿಯ ವೇಳೆ, ವಾಸ್ತವ್ಯ, ಕಾರ್ಮಿಕ ಮತ್ತು ಗಡಿ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ 12.5 ಲಕ್ಷಕ್ಕೂ ಅಧಿಕ ವಿದೇಶಿಯರನ್ನು ಬಂಧಿಸಲಾಗಿದೆ.

ಕಳೆದ ವರ್ಷದ ನವೆಂಬರ್ 16ರಂದು ಆರಂಭಗೊಂಡ ದಾಳಿಯು ಜೂನ್ 14ರಂದು ಕೊನೆಗೊಂಡಿತ್ತು. ಈ ಸಂದರ್ಭದಲ್ಲಿ 12,51,966 ವಿದೇಶಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಧಿತರಲ್ಲಿ 9,31,069 ಮಂದಿ ವಾಸ್ತವ್ಯ ನಿಯಮಗಳು, 2,18,897 ಕಾರ್ಮಿಕ ಕಾನೂನುಗಳು ಮತ್ತು 1,02,000 ಗಡಿ ಕಾನೂನುಗಳ ಉಲ್ಲಂಘಕರಾಗಿದ್ದಾರೆ.

ಸೌದಿ ಅರೇಬಿಯಕ್ಕೆ ಗಡಿ ದಾಟಲು ಯತ್ನಿಸಿದ 19,233 ಮಂದಿಯನ್ನೂ ಇದೇ ಅವಧಿಯಲ್ಲಿ ಬಂಧಿಸಲಾಗಿದೆ. ಈ ಪೈಕಿ 54 ಶೇಕಡ ಯಮನಿಗಳು, 43 ಶೇ. ಇಥಿಯೋಪಿಯನ್ನರು ಹಾಗೂ 3 ಶೇ. ಇತರ ದೇಶಗಳ ಜನರಾಗಿದ್ದಾರೆ.

ಇದೇ ಅವಧಿಯಲ್ಲಿ ಸೌದಿ ಅರೇಬಿಯದಿಂದ ಅಕ್ರಮವಾಗಿ ಹೊರ ಹೋಗಲು ಯತ್ನಿಸಿದ 790 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News