ಜಲ ವಿದ್ಯುತ್ ಸಂರಕ್ಷಣೆಗೆ ದುಬೈ ಹೊಸ ನಡೆ

Update: 2018-06-20 13:33 GMT

ಶಾರ್ಜಾ, ಜೂ. 20: ಯುಎಇ ಭಾರೀ ಬಿಸಿಲಿನ ದಾಳಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ರಕ್ಷಣೆ ಪಡೆಯಲು ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳು ಹಾಗೂ ಜಲಸಂಪನ್ಮೂಲಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಇವುಗಳ ಅನಗತ್ಯ ಬಳಕೆಗೆ ಕತ್ತರಿ ಹಾಕುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಯತ್ನಕ್ಕೆ ದುಬೈ ಜಲ ಹಾಗೂ ವಿದ್ಯುತ್ ಪ್ರಾಧಿಕಾರ (ದಿವಾ) ಕೈಹಾಕಿದೆ.

ಅತಿ ಹೆಚ್ಚು ವಿದ್ಯುತ್ ಬಳಕೆಯನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯಸೂಚಿಗಳ ಕುರಿತು ಅದು ಜನರಿಗೆ ಮಾಹಿತಿಯನ್ನು ನೀಡುತ್ತಿದೆ. ವಾಟರ್ ಹೀಟರ್, ಇಲೆಕ್ಟ್ರಿಕಲ್ ಓವನ್, ಇಸ್ತ್ರಿಪೆಟ್ಟಿಗೆ ಮುಂತಾದ ಉಪಕರಣಗಳ ಉಪಯೋಗವನ್ನು ಕಡಿಮೆಗೊಳಿಸಿ ಬೇಸಿಗೆಯಲ್ಲಿ ಅಗತ್ಯವಾಗಿ ಬೇಕಾದ ಉಪಕರಣಗಳನ್ನು ಮಾತ್ರ ಬಳಸಲು ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ಹಿಂದೆಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ದಿವಾ ಅದರಲ್ಲಿ ಯಶಸ್ಸು ಸಾಧಿಸಿತ್ತು.

  2009ರಿಂದ 2017ರವರೆಗಿನ ಅವಧಿಯಲ್ಲಿ 1.66 ಟೆರಾವ್ಯಾಟ್ ವಿದ್ಯುತ್ ಹಾಗೂ 666 ಕೋಟಿ ಗ್ಯಾಲನ್ ನೀರು ಸಂರಕ್ಷಿಸಲು ದುಬೈಗೆ ಈ ಅಭಿಯಾನದಿಂದ ಸಾಧ್ಯವಾಗಿದೆ. ಈ ಕ್ರಮಗಳಿಂದಾಗಿ ಬೊಕ್ಕಸಕ್ಕೆ 104 ಕೋಟಿ ದಿರ್ಹಂ (ಸುಮಾರು 1928 ಕೋಟಿ ರೂಪಾಯಿ) ಲಾಭವಾಗಿದೆ.

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News