ಅಜ್ಮನ್‌: ಬ್ಲೆಂಡ್ಸ್ ಆ್ಯಂಡ್ ಬ್ರೂಸ್‌ನ ನೂತನ ಮಳಿಗೆ ಉದ್ಘಾಟನೆ

Update: 2018-06-20 15:33 GMT

ಅಜ್ಮನ್, ಜೂ.20: ತುಂಬೆ ಸಮೂಹ ಸಂಸ್ಥೆಯ ಮಾಲಕತ್ವದ ಯುಎಇ ಮೂಲದ ಅಂತಾರಾಷ್ಟ್ರೀಯ ಕಾಫಿ ಶಾಪ್‌ಗಳ ಸರಣಿ ಬ್ಲೆಂಡ್ಸ್ ಆ್ಯಂಡ್ ಬ್ರೂಸ್‌ನ ನೂತನ ಮಳಿಗೆಯನ್ನು ಸೋಮವಾರ ಅಜ್ಮನ್‌ನ ಅಲ್ ಜುರ್ಫ್‌ನಲ್ಲಿರುವ ಜಮೀನು ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಇಲಾಖೆಯಲ್ಲಿ ತೆರೆಯಲಾಯಿತು.

ಈ ವೇಳೆ ಎಚ್.ಎಚ್ ಶೇಕ್ ಅಬ್ದುಲ್ ಅಝೀಝ್ ಹುಮೈದ್ ಅಲ್ ನೌಯಿಮಿಯವರ ಕಚೇರಿಯ ನಿರ್ದೇಶಕರಾದ ಎಚ್.ಇ ಶೇಕ್ ಅಬ್ದುಲ್ ಅಝೀಝ್ ಬಿನ್ ನಸೆರ್ ಅಲ್ ನೌಯಿಮಿ ಹಾಗೂ ಜಮೀನು ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಇಲಾಖೆಯ ಪ್ರಧಾನ ನಿರ್ದೇಶಕರಾದ ಎಚ್.ಇ ಯಫೀ ಅಲ್ ಫರಝ್ ಹಾಗೂ ತುಂಬೆ ಸಮೂಹ ಸಂಸ್ಥೆಯ ಹಾಸ್ಪಿಟಾಲಿಟಿ ವಿಭಾಗದ ನಿರ್ದೇಶಕ ಫರ್ಹದ್ ಸಿ. ಈ ವೇಳೆ ಉಪಸ್ಥಿತರಿದ್ದರು.

ಗ್ರಾಹಕರ ಭಾವಚಿತ್ರವನ್ನು ಅವರು ಖರೀದಿಸುವ ಕಾಫಿಯಲ್ಲಿ ರಚಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಉದ್ಘಾಟನಾ ಸಮಯದಲ್ಲಿ ತಯಾರಿಸಿದ ಮೊದಲ ಕಾಫಿಯಲ್ಲಿ ಯುಎಇ ಸ್ಥಾಪಕ ಪಿತಾಮಹ ದಿವಂಗತ ಶೇಕ್ ಝಯೇದ್ ಬಿನ್ ಸುಲ್ತಾನ್ ಅಲ್ ನಹ್ಯನ್ ಅವರ ಮುಖವನ್ನು ರಚಿಸುವ ಮೂಲಕ ಝಯೇದ್ ವರ್ಷವನ್ನು ಆಚರಿಸಿತು.

ಯುಎಇಯಲ್ಲಿ ಬ್ಲೆಂಡ್ಸ್ ಆ್ಯಂಡ್ ಬ್ರೂಸ್‌ನ ಹಲವು ಶಾಖೆಗಳಿದ್ದು ಭಾರತದ ಹೈದರಾಬಾದ್‌ನಲ್ಲೂ ಒಂದು ಶಾಖೆ ಕಾರ್ಯಾಚರಿಸುತ್ತಿದೆ. ಅತಿವೇಗವಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಬ್ರಾಂಡನ್ನು ಜಾಗತಿಕವಾಗಿ ವಿಸ್ತರಿಸಲು ಸಂಸ್ಥೆ ನಿರ್ಣಯಿಸಿದೆ.

2022ರ ವೇಳೆಗೆ ಹೆಚ್ಚುವರಿ ನೂರು ಶಾಖೆಗಳನ್ನು ತೆರೆಯುವ ಗುರಿಯನ್ನು ಸಂಸ್ಥೆಯು ಹೊಂದಿದೆ ಎಂದು ತುಂಬೆ ಸಮೂಹದ ಸ್ಥಾಪಕರಾದ ಡಾ. ತುಂಬೆ ಮೊಯ್ದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News