ಯುಎಇ: ಗುರುವಾರದ ಹಗಲು ಸುದೀರ್ಘ

Update: 2018-06-20 16:36 GMT

ಶಾರ್ಜಾ, ಜೂ. 20: ಯುಎಇಯಲ್ಲಿ ನಾಳಿನ (ಗುರುವಾರ) ಹಗಲು ಈ ವರ್ಷದ ಅತಿ ದೀರ್ಘವಾದ ಹಗಲಾಗಲಿದೆ ಹಾಗೂ ಉಷ್ಣತೆ 48 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭೂಮಿಯ ಉಷ್ಣ ವಲಯದಲ್ಲಿ ಯುಎಇ ಇರುವ ಹಿನ್ನೆಲೆಯಲ್ಲಿ, ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗಲಿದೆ ಎಂದು ಅದು ಮಾಹಿತಿ ನೀಡಿದೆ. ನಾಳಿನ ಹಗಲು 13 ಗಂಟೆಗಳು ಹಾಗೂ 42 ನಿಮಿಷಗಳಷ್ಟು ದೀರ್ಘವಾಗಿರಲಿದೆ. ಪಶ್ಚಿಮ ಹಾಗೂ ನೈಋತ್ಯ ದಿಕ್ಕಿನಿಂದ ಯುಎಇಯತ್ತ ರಭಸವಾಗಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಧೂಳು ಮಿಶ್ರಿತ ಗಾಳಿಯಿಂದ ರಕ್ಷಿಸಿಕೊಳ್ಳಬೇಕೆಂದು ಸೂಚಿಸಿದೆ.

ಜುಲೈ ಹಾಗೂ ಆಗಸ್ಟ್ ಮಧ್ಯ ಭಾಗದವರೆಗೂ ಇಲ್ಲಿ ಬೆಳಗ್ಗಿನ ಉಷ್ಣತೆ 48 ಡಿಗ್ರಿವರೆಗೆ ಹಾಗೂ ರಾತ್ರಿಯ ಉಷ್ಣತೆ 40 ಡಿಗ್ರಿಯಷ್ಟು ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News