ಯುಎಇ: ವಾಸ್ತವ್ಯ ವಿಸ್ತರಣೆಗೆ ಅರ್ಜಿ ಹಾಕುವ ದಿನಾಂಕ ಘೋಷಣೆ

Update: 2018-06-21 16:50 GMT

ಅಬುಧಾಬಿ, ಜೂ. 21: ಯುಎಇಯಲ್ಲಿ ವಾಸಿಸುತ್ತಿರುವ ಯುದ್ಧಗಳು ಮತ್ತು ವಿಪತ್ತುಗಳ ಸಂತ್ರಸ್ತರ ವಾಸ್ತವ್ಯ ವೀಸಾ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ನಿರ್ಧಾರಕ್ಕೆ ಸಂಬಂಧಿಸಿದ ವಿವರಗಳನ್ನು ಯುಎಇ ಹೊರಡಿಸಿದೆ.

 ಒಂದು ವರ್ಷದ ತುರ್ತು ವಾಸ್ತವ್ಯ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕದಿಂದ ಕೃಪಾ ವಾಸ್ತವ್ಯದ ಅವಧಿ ಆರಂಭವಾಗುತ್ತದೆ.

ಇದಕ್ಕಾಗಿ ಆಗಸ್ಟ್ 1ರಿಂದ ಅಕ್ಟೋಬರ್ 31ರವರೆಗೆ ಅರ್ಜಿ ಹಾಕಬಹುದಾಗಿದೆ.

ಇತ್ತೀಚೆಗೆ ವಿಧವೆಯಾದ ಮಹಿಳೆಯರೂ ಒಂದು ವರ್ಷದ ಹೆಚ್ಚಿನ ವಾಸ್ತವ್ಯಕ್ಕಾಗಿ ಇದೇ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಯುಎಇಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರು ತಮ್ಮ ತಪ್ಪನ್ನು ಸರಿಪಡಿಸುವುದಕ್ಕಾಗಿ ಅವರಿಗೆ ಒಂದು ವರ್ಷದ ವಾಸ್ತವ್ಯ ವಿಸ್ತರಣೆಯನ್ನು ನೀಡುವ ನಿರ್ಧಾರವನ್ನು ಇತ್ತೀಚೆಗೆ ದೇಶದ ಸಚಿವ ಸಂಪುಟ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News