ಯುಎಇ ಬೀಚ್‌ಗಳಲ್ಲಿ ಈ ಕೆಲಸ ಮಾಡಿದರೆ ಬೀಳಲಿದೆ ದಂಡ

Update: 2018-06-22 16:52 GMT

ಫುಜೈರಾ (ಯುಎಇ), ಜೂ. 22: ನೆರಳಿಗಾಗಿ ಸಾಲಾಗಿ ಕೊಡೆಗಳನ್ನು ಅಳವಡಿಸಲಾಗಿರುವ ಸಮುದ್ರ ಕಿನಾರೆಯಲ್ಲಿ ವಾಹನಗಳು ಮತ್ತು ಮೋಟರ್ ಸೈಕಲ್‌ಗಳನ್ನು ಚಲಾಯಿಸಬಾರದು ಎಂಬ ಎಚ್ಚರಿಕೆಯನ್ನು ಫುಜೈರಾ ಪೊಲೀಸರು ನೀಡಿದ್ದಾರೆ.

‘‘ಸಮುದ್ರ ಕಿನಾರೆಗೆ ಹೋಗುವ ಎಲ್ಲರ ಸುರಕ್ಷತೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿಯಮವನ್ನು ಜಾರಿಗೊಳಿಸುವುದಕ್ಕಾಗಿ ಪೊಲೀಸ್ ಗಸ್ತು ತಂಡಗಳನ್ನು ಕಳುಹಿಸಲಾಗುವುದು’’ ಎಂಬುದಾಗಿ ಪೊಲೀಸರು ತಮ್ಮ ‘ಇನ್‌ಸ್ಟಾಗ್ರಾಂ’ ಖಾತೆಯಲ್ಲಿ ಹಾಕಿದ ಸಂದೇಶದ ಮೂಲಕ ಹೇಳಿದ್ದಾರೆ.

 ‘‘ನಿಯಮವನ್ನು ಉಲ್ಲಂಘಿಸುವವರಿಗೆ 1,000 ದಿರ್ಹಮ್ (ಸುಮಾರು 18,500 ರೂಪಾಯಿ) ದಂಡ ವಿಧಿಸಲಾಗುವುದು ಹಾಗೂ 8 ಋಣಾತ್ಮಕ ಅಂಕಗಳನ್ನು ನೀಡಲಾಗುವುದು. ಅಂಥವರ ವಾಹನಗಳನ್ನು 7 ದಿನಗಳ ಅವಧಿಗೆ ಮುಟ್ಟುಗೋಲು ಹಾಕಲಾಗುವುದು’’ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News