ಅಬುಧಾಬಿ: ಕೈ-ಕಾಲುಗಳನ್ನು ಕಳೆದುಕೊಂಡ ಭಾರತೀಯನಿಗೆ 37 ಲಕ್ಷ ರೂ. ಪರಿಹಾರ

Update: 2018-06-22 17:11 GMT

 ಅಬುಧಾಬಿ, ಜೂ. 22: ಕೆಲಸದ ಸ್ಥಳದಲ್ಲಿ ನಡೆದ ಅಪಘಾತದ ವೇಳೆ ತನ್ನ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡ ಭಾರತೀಯರೊಬ್ಬರಿಗೆ, ಭಾರತೀಯ ರಾಯಭಾರ ಕಚೇರಿಯ ಮಧ್ಯಪ್ರವೇಶದ ಬಳಿಕ 2,02,000 ದಿರ್ಹಮ್ (ಸುಮಾರು 37.27 ಲಕ್ಷ ರೂಪಾಯಿ) ಪರಿಹಾರ ನೀಡಲಾಗಿದೆ.

ಪಂಜಾಬ್ ನಿವಾಸಿ ಗುರ್ಬಿಂದರ್ ಸಿಂಗ್‌ರಿಗೆ ಈ ಮೊದಲು ಕಂಪೆನಿಯು ಕೇವಲ 5,750 ದಿರ್ಹಮ್ (1.06 ಲಕ್ಷ ರೂಪಾಯಿ) ಅಂತಿಮ ಪರಿಹಾರವನ್ನು ಘೋಷಿಸಿತ್ತು ಹಾಗೂ ಅವರನ್ನು ಕೆಲಸದಿಂದಲೂ ತೆಗೆದುಹಾಕಿತ್ತು ಎಂದು ‘ಖಲೀಜ್ ಟೈಮ್ಸ್’ ಗುರುವಾರ ವರದಿ ಮಾಡಿದೆ.

ಬಳಿಕ, ಭಾರತೀಯ ರಾಯಭಾರ ಕಚೇರಿಯು ಸಿಂಗ್ ಕೆಲಸ ಮಾಡುವ ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತ್ತು. ರಾಯಭಾರ ಕಚೇರಿ ಅಧಿಕಾರಿಗಳು ನಡೆಸಿದ ಹಲವು ಸುತ್ತಿನ ಮಾತುಕತೆಗಳ ಬಳಿಕ, ಕಂಪೆನಿಯು ಪರಿಹಾರ ಮೊತ್ತವನ್ನು 2.02 ಲಕ್ಷ ದಿರ್ಹಮ್‌ಗೆ ಹೆಚ್ಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News