ಯುಎಇ: ಹಲವು ಒಪ್ಪಂದಗಳಿಗೆ ಅಧ್ಯಕ್ಷರ ಅನುಮೋದನೆ

Update: 2018-06-24 18:05 GMT

  ದುಬೈ, ಜೂ. 24: ಯುಎಇ ಮತ್ತು ಹಲವಾರು ಮಿತ್ರ ದೇಶಗಳ ನಡುವೆ ಏರ್ಪಟ್ಟ ಅಂತಾರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಮೋದನೆ ನೀಡುವ ಹಲವಾರು ಆದೇಶಗಳನ್ನು ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯನ್ ಹೊರಡಿಸಿದ್ದಾರೆ.

ಮಾಲ್ದೀವ್ಸ್‌ನಲ್ಲಿ ಯುಎಇ ರಾಯಭಾರ ಕಚೇರಿಯನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಅನುಮೋದನೆಯೂ ಇದರಲ್ಲಿ ಸೇರಿದೆ.

ಯುಎಇ ಮತ್ತು ರಶ್ಯಗಳ ಸಿವಿಲ್ ಇಂಜಿನಿಯರಿಂಗ್ ಕಂಪೆನಿಗಳ ನಡುವಿನ ಕೈಗಾರಿಕಾ, ತಾಂತ್ರಿಕ ಮತ್ತು ವೈಜ್ಞಾನಿಕ ಸಹಕಾರ ಒಪ್ಪಂದಕ್ಕೆ ಯುಎಇ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ.

ಯುಎಇ ಮತ್ತು ತಜಿಕಿಸ್ತಾನಗಳ ನಡುವೆ ಏರ್ಪಟ್ಟ ಪರಸ್ಪರ ಆಡಳಿತ ಸಹಕಾರ ಒಪ್ಪಂದಕ್ಕೂ ಅವರ ಅಂಗೀಕಾರ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News