ಕೆಎಸ್‌ರಿಲೀಫ್‌ನಿಂದ ಯಮನ್‌ಗೆ 12 ಟ್ರಕ್ ಸರಕು
Update: 2018-06-25 23:20 IST
ಜಿದ್ದಾ (ಸೌದಿ ಅರೇಬಿಯ), ಜೂ. 25: ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಯಮನ್‌ಗೆ ಇನ್ನೂ 12 ಟ್ರಕ್ ಸರಕು ಕಳುಹಿಸಿದೆ.
184 ಟನ್ ಆಹಾರ ಪದಾರ್ಥಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಹೊತ್ತ 12 ಟ್ರಕ್‌ಗಳು ಶನಿವಾರ ರಾತ್ರಿ ಅಲ್-ವಾಡಿಯ ಗಡಿ ಠಾಣೆಯನ್ನು ದಾಟಿದವು.
ಯಮನ್‌ನ ಸಂಘರ್ಷಪೀಡಿತ ಹುದೈದಾ ರಾಜ್ಯದ ಜನರಿಗಾಗಿ ನೆರವನ್ನು ಸಾಗಿಸಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಟ್ರಕ್‌ಗಳು ಹುದೈದಾ ತಲುಪಲಿವೆ.
ಜಗತ್ತಿನಾದ್ಯಂತ ಅಗತ್ಯವಿರುವ ಜನರಿಗೆ ಸೌದಿ ಅರೇಬಿಯ ಸರಕಾರದ ಒಡೆತನದ ಕೆಎಸ್‌ರಿಲೀಫ್ ನೆರವು ಒದಗಿಸುತ್ತಿದೆ. ಈ ಪೈಕಿ ಯಮನ್ ಕೆಎಸ್‌ರಿಲೀಫ್‌ನ ಅತಿ ದೊಡ್ಡ ಫಲನಾನುಭವಿ ದೇಶವಾಗಿದೆ.