ಫೆಲೆಸ್ತೀನ್ ಬಿಕ್ಕಟ್ಟಿಗೆ ಅವಳಿ-ದೇಶ ಪರಿಹಾರ ಪೂರಕ: ಸೌದಿ

Update: 2018-06-27 17:52 GMT

ಜಿದ್ದಾ (ಸೌದಿ ಅರೇಬಿಯ), ಜೂ. 27: ಅರಬ್ ಶಾಂತಿ ಯೋಜನೆಯ ಆಶಯದಂತೆ, ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಅವಳಿ-ದೇಶ ಪರಿಹಾರವು ಈ ವಲಯದ ಸಂಘರ್ಷವನ್ನು ಕೊನೆಗೊಳಿಸುವುದಕ್ಕೆ ಪೂರಕವಾಗಿದೆ ಎಂದು ಸೌದಿ ಅರೇಬಿಯ ಹೇಳಿದೆ.

ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದಲ್ಲಿನ ಪರಿಸ್ಥಿತಿ’ ಎಂಬ ವಿಷಯದ ಮೇಲೆ ನಡೆದ ಅಧಿವೇಶನದಲ್ಲಿ ಸೌದಿ ಅರೇಬಿಯದ ಉಪ ಖಾಯಂ ಪ್ರತಿನಿಧಿ ಡಾ. ಖಾಲಿದ್ ಮಂಝ್ಲವಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ಫೆಲೆಸ್ತೀನ್ ಜನತೆ ಅನ್ಯಾಯಯುತ ಆಕ್ರಮಣ, ದಮನ ಮತ್ತ ಜನಾಂಗೀಯವಾದಿ ನೀತಿಗಳಿಂದಾಗಿ ಸುದೀರ್ಘ ಅವಧಿಯಿಂದ ನರಳುತ್ತಿದ್ದಾರೆ’’ ಎಂದು ಅವರು ಹೇಳಿದರು. ಫೆಲೆಸ್ತೀನಿಯರ ಪರವಾಗಿ ಸೌದಿ ಅರೇಬಿಯ ಈಗಲೂ ನಿಂತಿದೆ ಎಂದರು.

ದಹ್ರನ್‌ನಲ್ಲಿ ನಡೆದ 29ನೇ ಅರಬ್ ಶೃಂಗಸಮ್ಮೇಳನದ ವೇಳೆ, ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರಿಗಾಗಿನ ಪರಿಹಾರ ಮತ್ತು ಕಾಮಗಾರಿ ಸಂಸ್ಥೆಗೆ ಸೌದಿ ಅರೇಬಿಯವು 50 ಮಿಲಿಯ ಡಾಲರ್ (ಸುಮಾರು 343 ಕೋಟಿ ರೂಪಾಯಿ) ದೇಣಿಗೆ ನೀಡಿದೆ ಎಂದು ಅವರು ತಿಳಿಸಿದರು.

ಯಮನ್‌ನಲ್ಲಿ ಕಾನೂನುಬದ್ಧ ಸರಕಾರವನ್ನು ಮರುಸ್ಥಾಪಿಸುವುದಕ್ಕಾಗಿ ಸೌದಿ ಅರೇಬಿಯವು ತನ್ನ ಮಿತ್ರದೇಶಗಳೊಂದಿಗೆ ಸೇರಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಸೌದಿ ರಾಯಭಾರಿ, ಕರಾಳ ಶಕ್ತಿಗಳಿಂದ ಯಮನ್ ಜನರನ್ನು ರಕ್ಷಿಸಲು ಹಾಗೂ ಇರಾನ್ ಬೆಂಬಲಿತ ಹೌದಿ ಬಂಡುಕೋರರಿಂದ ಕೆಲವು ಭೂಭಾಗಗಳನ್ನು ಮುಕ್ತಗೊಳಿಸಲು ಸೇನಾ ಕಾರ್ಯಾಚರಣೆಯೊಂದು ನಡೆದಿದೆ ಎಂದರು.

ಕೆಲವು ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶ ನಿಷೇಧಿಸುವ ಡೊನಾಲ್ಡ್ ಟ್ರಂಪ್ ಆಡಳಿತದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಜನರು ಮಂಗಳವಾರ ಸುಪ್ರೀಂ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಲಾಯಿಸುವುದರ ಮೇಲಿದ್ದ ನಿಷೇಧದ ತೆರವಿನೊಂದಿಗೆ ಸೌದಿ ಅರೇಬಿಯವು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದತ್ತ ಮುಂದುವರಿಯುತ್ತಿದೆ. ನಮ್ಮ ಸಮುದಾಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ನಾವು ಮುಂದಿನ ಹೆಜ್ಜೆಯನ್ನು ಇಡುತ್ತೇವೆ.

ರೀಮಾ ಬಿಂತ್ ಬಾಂದರ್, ಸೌದಿ ಅರೇಬಿಯ ರಾಜಕುಮಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News