ಸಿರಿಯ ಸಂಘರ್ಷ ಗಂಭೀರ ಹಂತದಲ್ಲಿ: ವಿಶ್ವಸಂಸ್ಥೆಗೆ ತಿಳಿಸಿದ ಸೌದಿ ಅರೇಬಿಯ

Update: 2018-06-28 16:02 GMT

ಜಿದ್ದಾ (ಸೌದಿ ಅರೇಬಿಯ), ಜೂ. 28: ಸಿರಿಯ ಬಿಕ್ಕಟ್ಟು ಮಾನವ ಇತಿಹಾಸದ ಅತ್ಯಂತ ಗಂಭೀರ ಹಾಗೂ ಹಿಂದೆಂದೂ ಕಾಣದ ಹಂತಕ್ಕೆ ತಲುಪಿದೆ ಎಂದು ಸೌದಿ ಅರೇಬಿಯವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಹೇಳಿದೆ.

 ಸಂತ್ರಸ್ತರು ಹೊರಹೋಗಲು ಅವಕಾಶ ನೀಡುವ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಿ ಎಂಬ ಮನವಿಗಳು ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳ ಹೊರತಾಗಿಯೂ, ಸಿರಿಯ ಸರಕಾರ ಮತ್ತು ಅದರ ಮಿತ್ರರು ಸೇನಾ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಗೆ ಸೌದಿ ಅರೇಬಿಯದ ಪ್ರತಿನಿಧಿ ಡಾ. ಫಾಹದ್ ಬಿನ್ ಉಬೈದುಲ್ಲಾ ಅಲ್-ಮುತೈರಿ ಹೇಳಿದರು.

ಸಿರಿಯ ಮತ್ತು ಅದರ ಮಿತ್ರಪಡೆಗಳ ಮುತ್ತಿಗೆ ಮುಂದುವರಿದಿದ್ದು, ಪಟ್ಟಣಗಳು ಮತ್ತು ಹಳ್ಳಿಗಳಿಂದ ಜನರು ನಿರ್ವಸಿತರಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಿರಿಯದಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಂಪರ್ಕ ಸಭೆಯೊಂದರಲ್ಲಿ ಅವರು ಮಾನವಹಕ್ಕು ಮಂಡಳಿಯನ್ನು ಒತ್ತಾಯಿಸಿದರು.

ಸುಮಾರು 7 ವರ್ಷಗಳ ಸುದೀರ್ಘ ಕಾಲ ನಡೆದ ಆಂತರಿಕ ಸಂಘರ್ಷದಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1.40 ಲಕ್ಷಕ್ಕೂ ಅಧಿಕ ನಾಗರಿಕರು ನಿರ್ವಸಿತರಾಗಿದ್ದಾರೆ.

ಸರಕಾರಿ ಪಡೆಗಳ ಅಮಾನುಷ ವಿಧಾನಗಳು ನಾಗರಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನಸಿಕ ಮತ್ತು ದೈಹಿಕ ದುಷ್ಪರಿಣಾಮಗಳನ್ನು ಬೀರಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News