ಕುವೈತ್: ಅಗಾಧ ಕೊರತೆ ಬಜೆಟ್ ಅಂಗೀಕಾರ

Update: 2018-06-28 16:03 GMT

ಕುವೈತ್ ಸಿಟಿ, ಜೂ. 28: ಕುವೈತ್ ಸಂಸತ್ತು ಬುಧವಾರ 2018-19ರ ಸಾಲಿಗೆ ಅಗಾಧ ಕೊರತೆ ಬಜೆಟ್ ಅಂಗೀಕರಿಸಿದೆ. ಕಿರಿದಾಗುತ್ತಿರುವ ಆರ್ಥಿಕತೆಯ ನಡುವೆ, ದೇಶವು ಸತತ ನಾಲ್ಕನೇ ವರ್ಷ ಕೊರತೆ ಬಜೆಟನ್ನು ಎದುರಿಸುತ್ತಿದೆ.

ಎಪ್ರಿಲ್ 1ರಂದು ಆರಂಭಗೊಂಡ ಆರ್ಥಿಕ ವರ್ಷದ ಬಜೆಟ್‌ನಲ್ಲಿ 21 ಬಿಲಿಯ ಡಾಲರ್ (1,44,364 ಕೋಟಿ ರೂಪಾಯಿ)ಗೂ ಅಧಿಕ ಕೊರತೆಯನ್ನು ತೋರಿಸಲಾಗಿದೆ. ಇದು ಒಪೆಕ್ ಸದಸ್ಯ ದೇಶಗಳ ಒಟ್ಟು ದೇಶಿ ಉತ್ಪನ್ನದ ಸುಮಾರು 17.5 ಶೇಕಡ ಆಗಿದೆ.

ಸರಕಾರಿ ಹಣ ಪೋಲಾಗುವುದನ್ನು ತಡೆಯಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿಯೂ ಸರಕಾರ ವಿಫಲವಾಗಿದೆ ಎಂದು ಬಜೆಟ್ ಮಂಡನೆಯ ವೇಳೆ ಹಲವು ಸಂಸದರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News