ಜುಲೈ 6: ದಾಸ್ ಕುಡ್ಲ ತಂಡದಿಂದ 'ಸುರ್ ಸಂಗಮ್' ಸಂಗೀತ ಕಾರ್ಯಕ್ರಮ

Update: 2018-06-29 17:12 GMT

ದುಬೈ, ಜೂ.29: 30ನೇ ವರ್ಷಾಚರಣೆ ಸಂಭ್ರಮದಲ್ಲಿರುವ ದಾಸ್ ಕುಡ್ಲಾಸ್ ತಂಡ ದುಬೈನ ಊದ್ ಮೆಹ್ತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ 'ಸುರ್ ಸಂಗಮ್' ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ಸೌಹಾರ್ದ ಲಹರಿ ಹಾಗೂ ಪ್ರೀಷಿಯಸ್ ಪಾರ್ಟೀಸ್ ಆ್ಯಂಡ್ ಎಂಟರ್ಟೈನ್'ಮೆಂಟ್ ಸಹಭಾಗಿತ್ವದಲ್ಲಿ ಜುಲೈ 6ರಂದು ಸಂಜೆ 6 ಗಂಟೆಯಿಂದ ಸತತ 4 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸುಮಾರು 40ಕ್ಕೂ ಹೆಚ್ಚಿನ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯುಎಇಯ ಪ್ರಸಿದ್ಧ ಎಬಿಸಿಡಿ ಡ್ಯಾನ್ಸ್ ತಂಡದಿಂದ ನೃತ್ಯ ಪ್ರದರ್ಶನ, ನಾಗೇಶ್ ಬುರ್ಬರೆಯವರ ನಟನಾ ಪ್ರದರ್ಶನ ನಡೆಯಲಿದೆ.

ಹಿಂದಿ, ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು, ಮರಾಠಿ, ಕೊಂಕಣಿ, ಪಂಜಾಬಿ, ರಾಜಸ್ಥಾನಿ, ಬ್ಯಾರಿ ಹೀಗೆ ಹತ್ತಕ್ಕೂ ಹೆಚ್ಚಿನ ಭಾಷೆಯ ಪ್ರಸಿದ್ಧ ಹಾಡುಗಳನ್ನು ಗಾಯಕರು ಹಾಡಲಿದ್ದು, ಸಂಗೀತ ಪ್ರೇಮಿಗಳಿಗೆ 250, 100, 50 ಮತ್ತು 30 ದಿರ್ಹಮಿನ ನಿಯಮಿತ ಟಿಕೆಟ್‍ಗಳು ಮಾತ್ರ ಲಭ್ಯವಿದೆ. ಕಾರ್ಯಕ್ರಮದ ಟಿಕೆಟ್ ಪಡೆಯಲು ದುಬೈನಲ್ಲಿ 0507855649, 0505588745, 0558898655, ಅಬುಧಾಬಿಯಲ್ಲಿ 0504401152, 0504953432 ಮತ್ತು ಶಾರ್ಜಾದಲ್ಲಿ 0505588375, 0556677249, 0506580103 ಸಂಖ್ಯೆಯನ್ನು ದೂರವಾಣಿ ಅಥವಾ ವಾಟ್ಸ್ಯಾಪ್ ಮೂಲಕ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News