ವಿಶ್ವಸಂಸ್ಥೆಯ ವರದಿ ತಪ್ಪು: ಸೌದಿ ನೇತೃತ್ವದ ಮಿತ್ರಕೂಟ

Update: 2018-06-29 17:47 GMT

ಜಿದ್ದಾ, ಜೂ. 29: ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಯಮನ್ ಸರಕಾರಕ್ಕೆ ಬೆಂಬಲ ನೀಡುವ ಅರಬ್ ಮಿತ್ರಕೂಟದ ಬಗ್ಗೆ ತಪ್ಪು ಮಾಹಿತಿ ನೀಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಿತ್ರಕೂಟವು ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ.

ಮಿತ್ರಕೂಟವು ಹಿಂಸಾಚಾರ ನಡೆಸಿದೆ ಎಂಬುದಾಗಿ ವಿಶ್ವಸಂಸ್ಥೆಯ ವಾರ್ಷಿಕ ವರದಿಯೊಂದರಲ್ಲಿ ಹೇಳಲಾಗಿದ್ದು, ಇದನ್ನು ಮಿತ್ರಕೂಟ ನಿರಾಕರಿಸಿದೆ.

ವಿಶ್ವಾಸಾರ್ಹವಲ್ಲದ ಮೂಲಗಳು ನೀಡಿದ ತಪ್ಪು ಮಾಹಿತಿಯ ಆಧಾರದಲ್ಲಿ ವಿಶ್ವಸಂಸ್ಥೆಯ ವರದಿ ತಯಾರಾಗಿದೆ ಎಂದು ಮಿತ್ರಪಡೆಯ ವಕ್ತಾರ ಕರ್ನಲ್ ತುರ್ಕಿ ಎಲ್-ಮಾಲಿಕಿ ಹೇಳಿದರು.

ತನ್ನ ವರದಿಗಳಲ್ಲಿ ಯಾವುದೇ ತಪ್ಪು ಮಾಹಿತಿ ನುಸುಳದಂತೆ ಖಾತರಿಪಡಿಸಲು ವಿಶ್ವಸಂಸ್ಥೆಯು ತನ್ನ ಪ್ರಕ್ರಿಯೆಗಳನ್ನು ಮಾರ್ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಶಸ್ತ್ರ ಸಂಘರ್ಷದ ವೇಳೆ ಮಕ್ಕಳು ಸೇರಿದಂತೆ ಎಲ್ಲ ನಾಗರಿಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಮಿತ್ರಕೂಟ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News