×
Ad

ದುಬೈ: ಸರಕಾರಿ ಉದ್ಯೋಗಿಗಳಿಗೆ ಹೆಚ್ಚಿನ ರಜೆ

Update: 2018-07-02 23:08 IST

ದುಬೈ, ಜು. 2: ದುಬೈಯ ಸರಕಾರಿ ಉದ್ಯೋಗಿಗಳ ವಾರ್ಷಿಕ ರಜೆಯನ್ನು ಹೆಚ್ಚಿಸಲಾಗಿದೆ. ಈ ಸಂಬಂಧ ರವಿವಾರ ನೂತನ ಮಾನವ ಸಂಪನ್ಮೂಗಳ ಕಾನೂನೊಂದನ್ನು ಹೊರಡಿಸಲಾಗಿದೆ.

ದರ್ಜೆ 8ರಿಂದ 11ರವರೆಗಿನ ಉದ್ಯೋಗಿಗಳು 25 ವೇತನಸಹಿತ ರಜೆಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಅವರು 22 ರಜೆಗಳನ್ನು ಪಡೆಯುತ್ತಿದ್ದರು. ಅದೇ ವೇಳೆ, ದರ್ಜೆ 7 ಮತ್ತು ಅದಕ್ಕಿಂತ ಕೆಳಗಿನ ಉದ್ಯೋಗಿಗಳು ವಾರ್ಷಿಕ 15ರ ಬದಲಿಗೆ 18 ರಜೆಗಳನ್ನು ಪಡೆಯುತ್ತಾರೆ.

ಸರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಪೂರಕ ಕೆಲಸದ ವಾತಾವರಣವನ್ನು ಒದಗಿಸಿಕೊಡುವುದಕ್ಕಾಗಿ ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಈ ಕಾನೂನನ್ನು ಜಾರಿಗೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News