ಯಮನ್ ನಿರ್ವಸಿತರಿಗೆ ಕೆಎಸ್‌ರಿಲೀಫ್‌ನಿಂದ ನೆರವು ವಿತರಣೆ

Update: 2018-07-03 17:09 GMT

ಜಿದ್ದಾ, ಜು. 3: ಯಮನ್‌ನ ಹುದೈದಾ ಪ್ರಾಂತದಲ್ಲಿ ಆಂತರಿಕ ಸಂಘರ್ಷದಿಂದ ನಿರ್ವಸಿತರಾಗಿರುವ ಜನರಿಗೆ ದೊರೆ ಸಲ್ಮಾನ್ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್)ವು ಆಹಾರ ಮತ್ತು ಪರಿಹಾರ ವಸ್ತುಗಳನ್ನು ವಿತರಿಸಿದೆ.

2007-17ರ ಅವಧಿಯಲ್ಲಿ ಕೆಎಸ್‌ರಿಲೀಫ್ ಜಗತ್ತಿನಾದ್ಯಂತ 32.83 ಬಿಲಿಯ ಡಾಲರ್ (ಸುಮಾರು 2,25,300 ಕೋಟಿ ರೂಪಾಯಿ) ನೆರವು ನೀಡಿದೆ ಎಂಬುದಾಗಿ ಅಂಕಿಅಂಶಗಳು ಹೇಳಿವೆ.

ಮಹತ್ವದ ಬಂದರು ನಗರವನ್ನು ಹೌದಿ ಬಂಡುಕೋರರಿಂದ ಮುಕ್ತಗೊಳಿಸುವುದಕ್ಕಾಗಿ ಯಮನ್ ಸೇನೆಯು ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳ ವಾಯು ದಾಳಿಯ ನೆರವಿನಿಂದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.

ಆಂತರಿಕ ಸಂಘರ್ಷದಲ್ಲಿ ನಾಗರಿಕರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದು, ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News