ಯಮನ್ ಕುರಿತ ವಿಶ್ವಸಂಸ್ಥೆ ವರದಿಯನ್ನು ತಿರಸ್ಕರಿಸಿದ ಸೌದಿ ಮಿತ್ರಕೂಟ

Update: 2018-07-03 17:14 GMT

ಜಿದ್ದಾ, ಜು. 3: ಯಮನ್ ಸಂಘರ್ಷದ ಬಗ್ಗೆ ವಿಶ್ವಸಂಸ್ಥೆ ತಯಾರಿಸಿದ ವರದಿಯನ್ನು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಮತ್ತೊಮ್ಮೆ ತಿರಸ್ಕರಿಸಿದೆ. ಕಾಳಗದಲ್ಲಿ ಮೃತಪಟ್ಟ ಮಕ್ಕಳ ಬಗ್ಗೆ ವರದಿಯಲ್ಲಿ ತಪ್ಪು ಮಾಹಿತಿ ಮತ್ತು ಅಂಕಿ-ಅಂಶವಿದೆ ಎಂದು ಅದು ಹೇಳಿದೆ.

‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ ಕುರಿತ ವಿಶ್ವಸಂಸ್ಥೆಯ ವಾರ್ಷಿಕ ವರದಿಯಲ್ಲಿ ಹಲವಾರು ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗಿದೆ ಹಾಗೂ ಅವುಗಳನ್ನು ಯಾವುದೇ ಆಧಾರ ಅಥವಾ ದಾಖಲೆಗಳಿಲ್ಲದೆ ಮಿತ್ರಕೂಟದ ಮೇಲೆ ಹೊರಿಸಲಾಗಿದೆ ಎಂದು ಮಿತ್ರಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.

ಯಮನ್ ಅಧ್ಯಕ್ಷರ ಬೆಂಬಲ ಹೊಂದಿರುವ ಸ್ಥಳೀಯ ಸಂಘಟನೆಗಳ ಮೂಲಕ, ತಾನು ವಿಶ್ವಸಂಸ್ಥೆ ಅಧಿಕಾರಿಗಳಿಗೆ ಸರಿಯಾದ ಅಂಕಿಅಂಶಗಳನ್ನು ಕಳುಹಿಸಿದ್ದೇನೆ ಎಂದು ಅಲ್-ಮಾಲಿಕಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News