ಸೌದಿ: ಮಹಿಳೆಯರ ವಾಹನ ಚಾಲನೆಯಿಂದ 50,000 ಉದ್ಯೋಗಾವಕಾಶ

Update: 2018-07-10 16:02 GMT

ಜಿದ್ದಾ, ಜು. 10: ಸೌದಿ ಅರೇಬಿಯದಲ್ಲಿ ಮಹಿಳೆಯರ ವಾಹನ ಚಾಲನೆ ಮೇಲಿನ ನಿಷೇಧವನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ, ಒಂದು ವರ್ಷದ ಬಳಿಕ ದೇಶದಲ್ಲಿ 50,000ಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಜಿದ್ದಾದಲ್ಲಿ ಸೋಮವಾರ ಮುಕ್ತಾಯಗೊಂಡ ಎರಡು ದಿನಗಳ ಮಹಿಳಾ ಸಮಾವೇಶವೊಂದರಲ್ಲಿ ಭಾಗವಹಿಸಿದ ಪರಿಣತರು ಈ ಭವಿಷ್ಯ ನುಡಿದಿದ್ದಾರೆ.

ಸಮಾವೇಶವನ್ನು ರಾಜಕುಮಾರ ಹಾಗೂ ಸೌದಿ ಅರೇಬಿಯನ್ ಮೋಟರ್ ಫೆಡರೇಶನ್ ಅಧ್ಯಕ್ಷ ಖಾಲಿದ್ ಬಿನ್ ಸುಲ್ತಾನ್ ಅಬ್ದುಲ್ಲಾ ಅಲ್-ಫೈಝಲ್ ಉದ್ಘಾಟಿಸಿದರು.

ಆಂತರಿಕ ಸಚಿವಾಲಯ ಮತ್ತು ಮಾಧ್ಯಮ ಸಚಿವಾಲಯ, ಸಂಚಾರ ನಿರ್ವಹಣೆ, ಸೌದಿ ಸಂಚಾರ ಸುರಕ್ಷೆ ಸಮಿತಿ ಹಾಗೂ ಮಾನದಂಡ ಸಮಿತಿ ಹಾಗೂ ಮಹಿಳೆಯರ ವಾಹನ ಚಾಲನೆ ಸೇವೆಗಳಿಗೆ ಸಂಬಂಧಿಸಿದ 6 ಸಂಸ್ಥೆಗಳು ಸಮಾವೇಶದಲ್ಲಿ ಭಾಗವಹಿಸಿವೆ.

ಸಮುದಾಯದ ಅರ್ಧದಷ್ಟಿರುವ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವ ಉದ್ದೇಶದೊಂದಿಗೆ ಸೌದಿ ಸರಕಾರ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ರಾಜಕುಮಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News