ಯುಎಇ: ಪ್ರವಾಸಿಗರ ತೆರಿಗೆ ಮರುಪಾವತಿ ವ್ಯವಸ್ಥೆಗೆ ಅಸ್ತು

Update: 2018-07-11 16:01 GMT

ಅಬುಧಾಬಿ, ಜು. 11: ಪ್ರವಾಸಿಗರ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮರುಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಯುಎಇ ಸಚಿವ ಸಂಪುಟ ಅನುಮೋದಿಸಿದೆ. ಈ ವ್ಯವಸ್ಥೆಯು ಚಿಲ್ಲರೆ ಮಾರಾಟ ಅಂಗಡಿಗಳು ಮತ್ತು ತೆರಿಗೆ ಮರುಪಾವತಿ ಕೇಂದ್ರಗಳ ನಡುವೆ ಸಂಪರ್ಕವನ್ನು ಏರ್ಪಡಿಸುತ್ತದೆ.

ಯುಎಇಯಲ್ಲಿ ತೆರಿಗೆ ವ್ಯವಸ್ಥೆಯನ್ನು ದಕ್ಷತೆಯಿಂದ ಜಾರಿಗೊಳಿಸುವ ಸರಕಾರದ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನೂತನ ತೆರಿಗೆ ಮರುಪಾವತಿ ವ್ಯವಸ್ಥೆಯು ಯುಎಇಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಹಾಗೂ ಪ್ರವಾಸಿಗರ ಜಾಗತಿಕ ಗಮ್ಯಸ್ಥಾನ ಎಂಬ ಅದರ ಹೆಗ್ಗಳಿಕೆಯನ್ನು ಕಾಯ್ದುಕೊಳ್ಳುತ್ತದೆ ಎಂಬುದಾಗಿ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News