ಇರಾನ್ ‘ಅತಿಕ್ರಮಣ’ ವಿರುದ್ಧ ವಿಶ್ವಸಂಸ್ಥೆಗೆ ಸೌದಿ ದೂರು

Update: 2018-07-11 16:07 GMT

ರಿಯಾದ್, ಜು. 11: ಸೌದಿ ಅರೇಬಿಯಕ್ಕೆ ಸೇರಿದ ಜಲಪ್ರದೇಶದ ತೈಲ ಕ್ಷೇತ್ರಗಳು ಮತ್ತು ಜಟ್ಟಿಗಳಿರುವ ನಿರ್ಬಂಧಿತ ಪ್ರದೇಶಗಳಿಗೆ ಇರಾನ್‌ನ ದೋಣಿಗಳು ಮತ್ತು ಹಡಗುಗಳು ಪದೇ ಪದೇ ಅಕ್ರಮ ಪ್ರವೇಶ ಮಾಡುತ್ತಿವೆ ಎಂದು ಸೌದಿ ಅರೇಬಿಯ ವಿಶ್ವಸಂಸ್ಥೆಗೆ ದೂರು ನೀಡಿದೆ.

 ಅಕ್ಟೋಬರ್ 2ರಂದು ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದ ಅನ್ವಯ ಅರೇಬಿಯನ್ ಕೊಲ್ಲಿಯಲ್ಲಿ ಸಾಗರ ಗಡಿರೇಖೆಯನ್ನು ಎಳೆಯಲಾಗಿದೆ.

ಇಂಥ ಕೃತ್ಯಗಳನ್ನು ನಿಲ್ಲಿಸುವಂತೆ ಸೌದಿ ಅರೇಬಿಯ ಇರಾನ್‌ಗೆ ಸೂಚಿಸಿದೆ.

ಇರಾನ್ ಸರಕಾರ ಮತ್ತು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗೆ ಪ್ರತಿಭಟನಾ ಪತ್ರವನ್ನು ಕಳುಹಿಸಿರುವ ಹೊರತಾಗಿಯೂ, ಇರಾನ್ ದೋಣಿಗಳು ಮತ್ತು ಹಡಗುಗಳ ಮೂಲಕ ಒಪ್ಪಂದದ ಉಲ್ಲಂಘನೆಗಳನ್ನು ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಸೌದಿ ಅರೇಬಿಯದ ಖಾಯಂ ಪ್ರತಿನಿಧಿ ಅಬ್ದುಲ್ಲಾ ಬಿನ್ ಯಾಹ್ಯಾ ಅಲ್ ಮುಅಲ್ಲಿಮಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News