ಅಫ್ಘಾನ್ ಯುದ್ಧ ಕೊನೆಗೊಳ್ಳಲಿ: ಮುಸ್ಲಿಮ್ ವಿದ್ವಾಂಸರ ಕರೆ

Update: 2018-07-11 17:03 GMT

ಜಿದ್ದಾ (ಸೌದಿ ಅರೇಬಿಯ), ಜು. 11: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸೆ ತಕ್ಷಣ ಕೊನೆಗೊಳ್ಳಬೇಕೆಂದು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕುರಿತ ಅಂತಾರಾಷ್ಟ್ರೀಯ ಉಲಮಾ ಸಮ್ಮೇಳನ ಕರೆ ನೀಡಿದೆ. ಮುಸ್ಲಿಮರ ನಡುವಿನ ಯುದ್ಧವನ್ನು ಇಸ್ಲಾಮ್ ಕಟ್ಟುನಿಟ್ಟಾಗಿ ನಿಷೇಧಿಸಿದೆ ಎಂದು ಅದು ಹೇಳಿದೆ.

ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಝಲ್‌ರ ಉಸ್ತುವಾರಿಯಲ್ಲಿ ಮಂಗಳವಾರ ನಡೆದ ಸಮ್ಮೇಳನದಲ್ಲಿ ಸೌದಿ ಅರೇಬಿಯ ಮತ್ತು ಮುಸ್ಲಿಮ್ ಜಗತ್ತಿನ ಹಿರಿಯ ಉಲಮಾಗಳು ಭಾಗವಹಿಸಿದ್ದರು.

ಸೌದಿ ಅರೇಬಿಯ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲತೀಫ್ ಬಿನ್ ಅಬ್ದುಲ್ ಅಝೀಝ್ ಅಲ್-ಅಶೇಕ್, ಮಕ್ಕಾ ಮಸೀದಿಯ ಇಮಾಮ್ ಶೇಖ್ ಸಾಲಿಹ್ ಬಿನ್ ಹುಮೈದ್ ಮತ್ತು ಸೌದಿ ರಾಜ ಆಸ್ಥಾನದ ಸಲಹೆಗಾರ ಹಾಗೂ ಇಫ್ತಾ ಖಾಯಂ ಸಮಿತಿಯ ಸದಸ್ಯ ಅಬ್ದುಲ್ಲಾ ಅಲ್-ಮುತ್ಲಕ್ ಸಮ್ಮೇಳನದಲ್ಲಿ ಹಾಜರಿದ್ದರು.

 ‘‘ಮುಸ್ಲಿಮ್ ವಿದ್ವಾಂಸರ ಈ ಸಮ್ಮೇಳನವು ನಮಗೆ ತುಂಬಾ ಮಹತ್ವದ್ದಾಗಿದೆ. ಮುಸ್ಲಿಮರು ಪರಸ್ಪರ ಯುದ್ಧ ನಡೆಸುವುದನ್ನು ಇಸ್ಲಾಮ್ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ’’ ಎಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯ ವಿಶೇಷ ಪ್ರತಿನಿಧಿ ಮುಹಮ್ಮದ್ ಅಕ್ರಮ್ ‘ಅರಬ್ ನ್ಯೂಸ್’ ಜೊತೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News