ಜಾಗತಿಕ ಮುಸ್ಲಿಮ್ ವಿದ್ವಾಂಸರ ನಿಯೋಗದಿಂದ ದೊರೆ ಸಲ್ಮಾನ್ ಭೇಟಿ

Update: 2018-07-13 10:52 GMT

ಮಕ್ಕಾ, ಜು. 12: ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಉಲಮಾ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಮುಸ್ಲಿಮ್ ವಿದ್ವಾಂಸರ ನಿಯೋಗವನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್ ಜಿದ್ದಾದ ಅಲ್-ಸಲಾಮ್ ಅರಮನೆಯಲ್ಲಿ ಬುಧವಾರ ಸ್ವಾಗತಿಸಿದರು.

ಈ ಸಮ್ಮೇಳನವನ್ನು ನಡೆಸಲು ಈ ವಿದ್ವಾಂಸರು ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ನಡೆಸಿದ ಪ್ರಯತ್ನಗಳನ್ನು ದೊರೆ ಸಲ್ಮಾನ್ ಶ್ಲಾಘಿಸಿದರು.

‘‘ಇಸ್ಲಾಮ್ ಮತ್ತು ಮುಸ್ಲಿಮರ ಸೇವೆ ಮಾಡಲು, ಅವರನ್ನು ಒಗ್ಗೂಡಿಸಲು ಹಾಗೂ ಬಿಕ್ಕಟ್ಟುಗಳು ಮತ್ತು ಯುದ್ಧಗಳನ್ನು ನಿವಾರಿಸಲು ನಿಮಗಿಂತ ಹೆಚ್ಚಿನ ಅರ್ಹರು ಬೇರೆ ಯಾರೂ ಇಲ್ಲ’’ ಎಂದು ದೊರೆ ಈ ಸಂದರ್ಭದಲ್ಲಿ ಹೇಳಿದರು.

‘‘ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಲು ಕರೆ ನೀಡುವ ಮಕ್ಕಾ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸುವುದರೊಂದಿಗೆ ಅಫ್ಘಾನಿಸ್ತಾನ ಕುರಿತ ಸಮ್ಮೇಳನ ಮುಕ್ತಾಯಗೊಳ್ಳಲಿದೆ. ಇದು ಇಸ್ಲಾಮ್ ಮತ್ತು ಅದರ ಬೋಧಕರ ಬೋಧನೆಗಳನ್ನು ಆಧರಿಸಿದ ಪರಿಹಾರವಾಗಿದೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಒಐಸಿ ಮಹಾಕಾರ್ಯದರ್ಶಿ ಡಾ. ಯೂಸುಫ್ ಬಿನ್ ಅಹ್ಮದ್ ಅಲ್-ಒತೈಮೀನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News