ಪ್ರವಾಸಿಗರ ವ್ಯಾಟ್ ಮರುಪಾವತಿ ಯೋಜನೆಗೆ ಯುಎಇ ಅಸ್ತು

Update: 2018-07-13 16:20 GMT

ದುಬೈ, ಜು. 13: ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೌಲ್ಯವರ್ಧಿತ ಸೇವೆ (ವ್ಯಾಟ್) ತೆರಿಗೆಯ ಮರುಪಾವತಿ ಲಭಿಸುತ್ತದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಡಬ್ಲುಎಎಂ ವರದಿ ಮಾಡಿದೆ.

ಈ ವರ್ಷದ ಜನವರಿ 1ರಿಂದ ಅನ್ವಯವಾಗುವಂತೆ ಯುಎಇಯಲ್ಲಿ 5 ಶೇಕಡ ದರದಲ್ಲಿ ವ್ಯಾಟ್ ಜಾರಿಗೊಳಿಸಲಾಗಿದೆ.

 ನೂತನ ವ್ಯಾಟ್ ಮರುಪಾವತಿ ವ್ಯವಸ್ಥೆಯಲ್ಲಿ, ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸುವ ಹಾಗೂ ಪ್ರವಾಸಿಗರ ಜಾಗತಿಕ ಗಮ್ಯತಾಣ ಎಂಬ ಯುಎಇಯ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವ ಉದ್ದೇಶವಿದೆ ಎಂದು ವರದಿ ಹೇಳಿದೆ.

‘‘ವ್ಯವಸ್ಥೆಯನ್ನು 2018ರ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ವಸೂಲಿ ಸೇವೆಯಲ್ಲಿರುವ ಅಂತಾರಾಷ್ಟ್ರೀಯ ಪರಿಣತ ಕಂಪೆನಿಯೊಂದರ ಸಹಕಾರದೊಂದಿಗೆ ಜಾರಿಗೊಳಿಸಲಾಗುತ್ತದೆ’’ ಎಂದು ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

ಆದಾಗ್ಯೂ, ವ್ಯಾಟ್ ಮರುಪಾವತಿ ಯೋಜನೆಯು ಎಲ್ಲ ಖರೀದಿಗಳಿಗೆ ಅನ್ವಯವಾಗುವುದಿಲ್ಲ. ಆಯ್ದ ಅಂಗಡಿಗಳಿಂದ ಖರೀದಿಸಲಾದ ವಸ್ತುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News