ಸೌದಿ: ಆಹಾರ ಪೋಲು ತಡೆಯಲು ಒಪ್ಪಂದ

Update: 2018-07-14 17:14 GMT

ಜಿದ್ದಾ, ಜು. 14: ಸೌದಿ ಅರೇಬಿಯದ ಕ್ರೀಡಾ ಮಹಾ ಪ್ರಾಧಿಕಾರವು ಸೌದಿ ಆಹಾರ ಬ್ಯಾಂಕ್ ಜೊತೆಗೆ ಆಹಾರ ಪೋಲಾಗುವುದನ್ನು ತಡೆಯುವ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಕ್ರೀಡಾ ಮಹಾ ಪ್ರಾಧಿಕಾರದ ಅಂಗ ಸಂಸ್ಥೆಯಾಗಿರುವ ಸೌದಿ ಕಮ್ಯುನಿಟಿ ಸ್ಪೋರ್ಟ್ಸ್ ಯೂನಿಯನ್ (ಎಸ್‌ಸಿಎಸ್‌ಯು)ನ ವಿವಿಧ ಚಟುವಟಿಕೆಗಳ ಮೂಲಕ ಆಹಾರ ಸಂರಕ್ಷಣೆಗೆ ಉತ್ತೇಜನ ನೀಡುವುದು ಮತ್ತು ಆಹಾರ ಪೋಲಾಗುವುದನ್ನು ತಡೆಯವುದು ಒಪ್ಪಂದದ ಉದ್ದೇಶವಾಗಿದೆ.

ಸ್ವಯಂಸೇವಕರಿಗೆ ತರಬೇತಿ ನೀಡುವುದು ಮತ್ತು ಆಹಾರ ಸಂರಕ್ಷಣೆ ಮತ್ತು ವಿತರಣೆಯ ಮೂಲ ಅಂಶಗಳನ್ನು ಕಲಿಸುವುದು ಒಪ್ಪಂದದಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News