ಕೆಎಸ್‌ರಿಲೀಫ್‌ನಿಂದ 5,000 ಯಮನ್ ವಿದ್ಯಾರ್ಥಿಗಳಿಗೆ ನೆರವು

Update: 2018-07-17 17:35 GMT

ಜಿದ್ದಾ, ಜು. 17: ಯಮನ್‌ನಲ್ಲಿ ನೆಲೆಸಿರುವ ಆಂತರಿಕ ಸಂಘರ್ಷದ ಹೊರತಾಗಿಯೂ, ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ಅಗತ್ಯವಸ್ತುಗಳನ್ನು ಪೂರೈಸುವ ಯೋಜನೆಗೆ ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಚಾಲನೆ ನೀಡಿದೆ.

ನೆರವು ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳು ಸೋಮವಾರ ರಿಯಾದ್‌ನಿಂದ ಯಮನ್‌ಗೆ ಹೊರಟಿವೆ.

 ‘‘ಉತ್ತಮ ಶೈಕ್ಷಣಿಕ ಪರಿಸರವನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡು ಯಮನ್‌ನ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಯೋಜನೆ ಇದಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ವಸ್ತುಗಳಿಗೆ ಹೊರತಾಗಿ ಕುರ್ಚಿಗಳು, ಡೆಸ್ಕ್‌ಗಳು ಮತ್ತು ಬೋರ್ಡ್‌ಗಳನ್ನು ನೀಡಲಾಗುವುದು. ಈ ಯೋಜನೆಯಿಂದ ಯಮನ್‌ನಾದ್ಯಂತ ಸುಮಾರು 5,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವುದು’’ ಎಂದು ಕೆಎಸ್‌ರಿಲೀಫ್ ವಕ್ತಾರ ಡಾ. ಸಮೀರ್ ಅಲ್ಜೆಟೈಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News