ಸೌದಿ: ಮಕ್ಕಳ ಆತ್ಮಹತ್ಯೆ ಬಳಿಕ 47 ಗೇಮ್‌ಗಳಿಗೆ ನಿಷೇಧ

Update: 2018-07-17 18:10 GMT

ರಿಯಾದ್, ಜು. 17: ಆನ್‌ಲೈನ್ ಆಟವೊಂದರಲ್ಲಿ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವಾರು ವೀಡಿಯೊ ಗೇಮ್‌ಗಳನ್ನು ನಿಷೇಧಿಸುವುದಾಗಿ ಸೌದಿ ಅರೇಬಿಯ ಹೇಳಿದೆ.

ತಾನು 47 ಗೇಮ್‌ಗಳನ್ನು ನಿಷೇಧಿಸುವುದಾಗಿ ಸೌದಿ ಜನರಲ್ ಕಮಿಶನ್ ಫಾರ್ ಆಡಿಯೊ-ವಿಶುವಲ್ ಮೀಡಿಯ ಸೋಮವಾರ ತಿಳಿಸಿದೆ. ಗ್ರಾಂಡ್ ತೆಫ್ಟ್ ಆಟೊ ವಿ, ಅಸಾಸಿನ್ಸ್ ಕ್ರೀಡ್ 2 ಮತ್ತು ವಿಚರ್ ಈ ಪಟ್ಟಿಯಲ್ಲಿದೆ.

ಬ್ಲೂ ವೇಲ್ ಸೋಶಿಯಲ್ ಮೀಡಿಯ ಗೇಮ್ ಎನ್ನಲಾದ ಆಟವನ್ನು ಆಡಿದ ಬಳಿಕ, 13 ವರ್ಷದ ಬಾಲಕಿ ಮತ್ತು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ನಿಷೇಧ ವಿಧಿಸಲಾಗಿದೆ.

ಬ್ಲೂ ವೇಲ್ ಚಾಲೆಂಜ್ ಎಂಬುದಾಗಿಯೂ ಕರೆಯಲ್ಪಡುವ ಈ ಗೇಮ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸುವ ಮಕ್ಕಳಿಗೆ ಸವಾಲಿನ ಸಾವನ್ನು ಒದಗಿಸುತ್ತದೆ ಎನ್ನಲಾಗಿದೆ. ಆಟಗಾರರು ಹಲವಾರು ಸಾಹಸಿಕ ಸವಾಲುಗಳನ್ನು ಮುಗಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News