ಯುಎಇ: 2018ರ ಮೊದಲಾರ್ಧದಲ್ಲಿ ಕಡಿಮೆಯಾದ ಜೀವನವೆಚ್ಚ

Update: 2018-07-18 18:26 GMT

ದುಬೈ, ಜು. 18: 2018ರ ಮೊದಲಾರ್ಧದಲ್ಲಿ ಯುಎಇಯಲ್ಲಿ ಜೀವನವೆಚ್ಚ ನಿರಂತರವಾಗಿ ಕಡಿಮೆಯಾಗಿದೆ. ಬಾಡಿಗೆ ದರದಲ್ಲಿ ಇಳಿಕೆ, ಸರಕಾರಿ ಕಚೇರಿಗಳ ಸಾರ್ವಜನಿಕ ಸೇವೆಗಳ ಶುಲ್ಕಗಳಲ್ಲಿ ಇಳಿಕೆ, ಶಾಲಾ ಶುಲ್ಕದಲ್ಲಿ ಇಳಿಕೆ ಅಥವಾ ಯಥಾಸ್ಥಿತಿ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಮುಖ ಕರೆನ್ಸಿಗಳ ಎದುರು ದಿರ್ಹಮ್ ಬಲಗೊಂಡಿರುವುದು ಇದಕ್ಕೆ ಕಾರಣಗಳಾಗಿವೆ.

 ‘ನಂಬಿಯೊ’ ಬಿಡುಗಡೆ ಮಾಡಿದ ಜೀವನವೆಚ್ಚ ಸೂಚ್ಯಂಕದ ಅನುಸಾರ, ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ದುಬೈ ಮತ್ತು ಅಬುಧಾಬಿ ನಗರಗಳು ಕ್ರಮವಾಗಿ 113 ಮತ್ತು 97ನೇ ಸ್ಥಾನಗಳನ್ನು ಪಡೆದುಕೊಂಡಿವೆ. 2017ರ ಮೊದಲಾರ್ಧದಲ್ಲಿ ಈ ನಗರಗಳು ಕ್ರಮವಾಗಿ 72 ಮತ್ತು 93ನೇ ಸ್ಥಾನಗಳನ್ನು ಪಡೆದಿದ್ದವು.

ಅಂದರೆ, ಈ ಸೂಚ್ಯಂಕದ ಪ್ರಕಾರ, ಯುಎಇಯ ಎರಡು ಅತಿ ದೊಡ್ಡ ಎಮಿರೇಟ್‌ಗಳು ನಿವಾಸಿಗಳು ಮತ್ತು ಪ್ರವಾಸಿಗರಿಗೆ ಹೆಚ್ಚು ಮಿತವ್ಯಯಕರವಾಗಿ ಪರಿಣಮಿಸಿವೆ.

ದುಬೈ ನಿವಾಸಿಗಳ ಖರೀದಿ ಸಾಮರ್ಥ್ಯ 2017ರ ಮೊದಲಾರ್ಧದಲ್ಲಿದ್ದ 101.67 ಅಂಶಗಳಿಂದ 2018ರ ಮೊದಲಾರ್ಧದಲ್ಲಿ 153.68 ಅಂಶಳಿಗೆ ಹೆಚ್ಚಿದೆ. ಇದೇ ಅವಧಿಯಲ್ಲಿ, ಜೀವನವೆಚ್ಚ ಸೂಚ್ಯಂಕವು 73.95ರಿಂದ 53.32ಕ್ಕೆ ಏರಿದೆ.

ಜೀವನ ಗುಣಮಟ್ಟ, ಸುರಕ್ಷತೆ ಮತ್ತು ಆರೋಗ್ಯ ಸೂಚ್ಯಂಕಗಳಲ್ಲಿ ಅಬುಧಾಬಿ ಮುಂದಿದೆ. ಆದರೆ, ಖರೀದಿ ಸಾಮರ್ಥ್ಯ ಮತ್ತು ಸಾರಿಗೆ ಸಮಯ ಸೂಚ್ಯಂಕದಲ್ಲಿ ಹಿಂದೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News