ಯುವ ಸೌದಿಗಳ ಸಬಲೀಕರಣಕ್ಕೆ ವಿನೂತನ ಕಾರ್ಯಕ್ರಮ

Update: 2018-07-19 15:57 GMT

ರಿಯಾದ್, ಜು. 19: ಇಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸೌದಿ ಅರೇಬಿಯ ಪ್ರಜೆಗಳಿಗೆ ತರಬೇತಿ ನೀಡುವ ಮಹತ್ವದ ಕಾರ್ಯಕ್ರಮವೊಂದಕ್ಕೆ ದೇಶದ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಚಾಲನೆ ನೀಡಿದೆ.

ಇಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ಸ್ಥಾನವನ್ನು ಇವರು ಕ್ರಮವಾಗಿ ತುಂಬುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ.

 ಯುವ ಸೌದಿಗಳಿಗೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳ ಭಾಗವಾಗಿ ಅಲ್ಫನರ್ ಗ್ರೂಪ್‌ನ ಸಹಕಾರದೊಂದಿಗೆ ರಿಯಾದ್‌ನಲ್ಲಿ ತರಬೇತಿ ಕಾರ್ಯಕ್ರಮವನ್ನು ಸಚಿವಾಲಯ ಏರ್ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News