130 ಸೌದಿ ಮಹಿಳೆಯರಿಗೆ ವಾಯು ಸಂಚಾರ ನಿಯಂತ್ರಣ ತರಬೇತಿ

Update: 2018-07-25 17:55 GMT

ರಿಯಾದ್, ಜು. 25: ಸೌದಿ ನಾಗರಿಕ ವಾಯುಯಾನ ಅಕಾಡೆಮಿಯು ವಾಯು ಸಂಚಾರ ನಿಯಂತ್ರಣ (ಏರ್ ಟ್ರಾಫಿಕ್ ಕಂಟ್ರೋಲ್) ಕೋರ್ಸ್‌ಗಾಗಿ 130 ಮಹಿಳಾ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಈ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಎರಡನೆ ತಂಡದವರಾಗಿದ್ದಾರೆ. ಕಾರ್ಯಕ್ರಮ ಪೂರ್ಣಗೊಂಡ ಬಳಿಕ, ಈ ಅಭ್ಯರ್ಥಿಗಳನ್ನು ವಾಯು ಸಂಚಾರ ನಿಯಂತ್ರಕಿಯರನ್ನಾಗಿ ನೇಮಿಸಲಾಗುವುದು.

ಸೌದಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಸೌದಿ ವಾಯು ನಿಯಂತ್ರಣ ಸೇವೆ (ಎಸ್‌ಎಎನ್‌ಎಸ್)ಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

ಈ ಕೋರ್ಸ್‌ನಲ್ಲಿ ಭೌತಶಾಸ್ತ್ರ, ಗಣಿತ, ವಾಯುಯಾನ ಭಾಷೆ, ಪ್ರಾಥಮಿಕ ಏರೋಡೈನಾಮಿಕ್ ತರಬೇತಿ ಮತ್ತು ಟವರ್ ನಿಯಂತ್ರಣಗಳನ್ನು ಕಲಿಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News