ಅಬುಧಾಬಿಯಲ್ಲಿ ಇನ್ನು ‘ವೇಗ ವಲಯ’ವಿಲ್ಲ

Update: 2018-07-25 17:58 GMT

ಅಬುಧಾಬಿ, ಜು. 25: ಯುಎಇಯ ಎಮಿರೇಟ್‌ಗಳಲ್ಲಿ ಒಂದಾಗಿರುವ ಅಬುಧಾಬಿಯಲ್ಲಿನ ‘ವೇಗ ವಲಯ’ (ಸ್ಪೀಡ್ ಬಫರ್)ವನ್ನು ತೆಗೆಯಲಾಗುವುದು ಎಂದು ಅಬುಧಾಬಿ ಪೊಲೀಸರು ಬುಧವಾರ ಹೇಳಿದ್ದಾರೆ.

ಆಗಸ್ಟ್ 12ರಿಂದ ರಾಜಧಾನಿಯಲ್ಲಿ ಎಲ್ಲ ವೇಗ ಮಿತಿಗಳು ಬದಲಾಗುವುದು ಹಾಗೂ ಎಲ್ಲ ರಸ್ತೆಗಳಲ್ಲಿರುವ ವೇಗ ವಲಯವನ್ನು ತೆಗೆದುಹಾಕಲಾಗುವುದು ಎಂದು ಅಬುಧಾಬಿ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪ್ರಸಕ್ತ, ರಾಜಧಾನಿಯಲ್ಲಿನ ಹೆಚ್ಚಿನ ರಸ್ತೆಗಳಲ್ಲಿ ವೇಗ ವಲಯವಿದೆ. ಈ ವಲಯಗಳಲ್ಲಿ, ಆ ರಸ್ತೆಗಳ ಗರಿಷ್ಠ ವೇಗ ಮಿತಿಗಿಂತ 20 ಕಿ.ಮೀ. (ಗಂಟೆಗೆ) ಹೆಚ್ಚು ವೇಗದಲ್ಲಿ ಹೋಗಬಹುದಾಗಿದೆ. ಇದಕ್ಕೆ ದಂಡ ಹಾಕಲಾಗುವುದಿಲ್ಲ.

ಆದರೆ, ಆಗಸ್ಟ್ 12ರ ಬಳಿಕ, ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ರಸ್ತೆಯಲ್ಲಿ 101 ಕಿ.ಮೀ. ವೇಗದಲ್ಲಿ ಹೋದರೆ ದಂಡ ವಿಧಿಸಲಾಗುವುದು.

ಸಂಚಾರ ಸುರಕ್ಷತೆ ಅಧ್ಯಯನ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬುಧಾಬಿ ಪೊಲೀಸ್‌ನ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News