ಆ್ಯಪಲ್ ಸಹ ಸಂಸ್ಥಾಪಕ ಸೌದಿ ತಂತ್ರಜ್ಞಾನ ರಾಯಭಾರಿ

Update: 2018-08-04 17:59 GMT

ಜಿದ್ದಾ, ಆ. 4: ಸೌದಿ ಸೈಬರ್‌ ಸೆಕ್ಯುರಿಟಿ, ಪ್ರೋಗ್ರಾಮಿಂಗ್ ಮತ್ತು ಡ್ರೋನ್ಸ್ ಫೆಡರೇಶನ್ (ಎಸ್‌ಎಎಫ್‌ಸಿಎಸ್‌ಪಿ) ಅಮೆರಿಕದ ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ವೊಝ್ನಿಯಾಕ್‌ರನ್ನು ‘ಸೌದಿ ಟೆಕ್ ಹಬ್’ ನಿರ್ಮಾಣದ ರಾಯಭಾರಿಯಾಗಿ ನೇಮಿಸಿದೆ.

ಜಿದ್ದಾದಲ್ಲಿ ನಡೆದ ಮೂರು ದಿನಗಳ ಹಜ್ ಹ್ಯಾಕತಾನ್‌ನ ಕೊನೆಯ ದಿನವಾದ ಶುಕ್ರವಾರ ಫೆಡರೇಶನ್ ಮುಖ್ಯಸ್ಥ ಹಾಗೂ ರಾಜ ಆಸ್ಥಾನದ ಸಲಹಾಕಾರ ಸೌದ್ ಬಿನ್ ಅಬ್ದುಲ್ಲಾ ಅಲ್-ಕಹ್ತಾನಿ ವೊಝ್ನಿಯಾಕ್‌ಗೆ ನೇಮಕಾತಿ ಪತ್ರವನ್ನು ನೀಡಿದರು.

ಸೌದಿ ಅರೇಬಿಯವನ್ನು ಈ ವಲಯದ ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಕ್ಷೇತ್ರದ ಶ್ರೇಷ್ಠ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಫೆಡರೇಶನ್‌ನ ಬದ್ಧತೆಯನ್ನು ಈ ನೇಮಕಾತಿ ತೋರಿಸುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅಲ್-ಕಹ್ತಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News