ಸೌದಿ: ಕೊಲೆ ಅಪರಾಧಿಗೆ ಮರಣದಂಡನೆ

Update: 2018-08-10 16:57 GMT

ದುಬೈ, ಆ. 10: ಓರ್ವ ಮಹಿಳೆಯನ್ನು ಕೊಂದ ಹಾಗೂ ಇತರ ಆರೋಪಗಳನ್ನು ಎದುರಿಸುತ್ತಿರುವ ಮ್ಯಾನ್ಮಾರ್ ಪ್ರಜೆಯೊಬ್ಬನಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯ ಹೇಳಿದೆ.

ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಆತನನ್ನು ನೇಣಿಗೆ ಹಾಕಲಾಯಿತು ಎಂದು ಸರಕಾರಿ ಒಡೆತನದ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಇಲ್ಯಾಸ್ ಅಬುಲ್‌ಕಲಾಮ್ ಜಮಾಲುದ್ದೀನ್ ಮ್ಯಾನ್ಮಾರ್ ಮಹಿಳೆಯೊಬ್ಬರ ಮನೆಗೆ ಗುಂಡು ಹಾರಿಸುತ್ತಾ ನುಗ್ಗಿ ಬಳಿಕ ಚಾಕುವಿನಿಂದ ಇರಿದನು ಎಂದು ಅದು ಹೇಳಿದೆ.

ಅವನು ಮಹಿಳೆಯ ಮನೆಯನ್ನು ದೋಚಿದನು ಹಾಗೂ ಇನ್ನೊಂದು ಮನೆಯನ್ನು ದೋಚಿದನು, ಅತ್ಯಾಚಾರಕ್ಕೆ ಯತ್ನಿಸಿದನು ಹಾಗೂ ಮದ್ದುಗುಂಡುಗಳನ್ನು ಕದ್ದನು ಎಂಬ ಆರೋಪಗಳನ್ನು ಹೊರಿಸಲಾಗಿದೆ. ಎಲ್ಲ ಆರೋಪಗಳಲ್ಲಿ ಅವನು ಅಪರಾಧ ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News