ಯುಎಇ: ಭಯೋತ್ಪಾದನೆ ಹರಡುವ ವೆಬ್‌ಸೈಟ್‌ಗಳಿಗೆ ಉಗ್ರ ಶಿಕ್ಷೆ

Update: 2018-08-13 16:27 GMT

ಅಬುಧಾಬಿ, ಆ. 13: ಭಯೋತ್ಪಾದನೆಯನ್ನು ಹರಡುವ ಹಾಗೂ ಪ್ರಚೋದನೆ ನೀಡುವ ವೆಬ್‌ಸೈಟ್‌ಗಳನ್ನು ಅಥವಾ ಕಂಪ್ಯೂಟರ್ ಜಾಲಗಳನ್ನು ನಡೆಸುವ ವ್ಯಕ್ತಿಗಳಿಗೆ ಅಥವಾ ಗುಂಪುಗಳ ಮುಖ್ಯಸ್ಥರಿಗೆ 10ರಿಂದ 25 ವರ್ಷಗಳ ಜೈಲು ಶಿಕ್ಷೆ ಹಾಗೂ 2 ಮಿಲಿಯ (ಸುಮಾರು 3.80 ಕೋಟಿ ರೂಪಾಯಿ) ದಿಂದ 4 ಮಿಲಿಯ ದಿರ್ಹಮ್ (ಸುಮಾರು 7.60 ಕೋಟಿ ರೂಪಾಯಿ) ದಂಡ ವಿಧಿಸುವ ಆದೇಶವೊಂದನ್ನು ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯನ್ ಹೊರಡಿಸಿದ್ದಾರೆ.

ಅದೇ ವೇಳೆ, ದ್ವೇಷ ಹರಡುವ ವೆಬ್‌ಸೈಟ್‌ಗಳು ಅಥವಾ ಕಂಪ್ಯೂಟರ್ ಜಾಲಗಳಿಗೆ 5 ವರ್ಷಗಳವರೆಗಿನ ಜೈಲು ಶಿಕ್ಷೆ ಹಾಗು 5 ಲಕ್ಷ ದಿರ್ಹಮ್ (95 ಲಕ್ಷ ರೂಪಾಯಿ) ನಿಂದ 10 ಲಕ್ಷ ದಿರ್ಹಮ್ (1.9 ಕೋಟಿ ರೂಪಾಯಿ)ವರೆಗೆ ದಂಡ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News