ಸೌದಿ: ಅಮೂರ್ತ ಕರೆನ್ಸಿ ಬಳಸದಂತೆ ಎಚ್ಚರಿಕೆ

Update: 2018-08-13 16:48 GMT

ಜಿದ್ದಾ, ಆ. 13: ಅಮೂರ್ತ (ಭೌತಿಕವಾಗಿ ಅಸ್ತಿತ್ವದಲ್ಲಿಲ್ಲದ) ಕರೆನ್ಸಿಗಳನ್ನು ಬಳಸಿ ವ್ಯವಹಾರ ಮತ್ತು ಹೂಡಿಕೆಗಳನ್ನು ಮಾಡದಂತೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಅನಧಿಕೃತ ಸೆಕ್ಯುರಿಟೀಸ್ ಚಟುವಟಿಕೆಗಳೊಂದಿಗೆ ವ್ಯವಹರಿಸುವ ಸೌದಿ ಅರೇಬಿಯದ ವಿಶೇಷ ಸರಕಾರಿ ಸಮಿತಿ ಎಚ್ಚರಿಕೆ ನೀಡಿದೆ.

ಇಂಥ ವ್ಯವಹಾರಗಳು ಸೌದಿ ಅರೇಬಿಯದಲ್ಲಿರುವ ನಿಗಾ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿರುವುದರಿಂದ ಅಪಾಯವೂ ಇರುತ್ತದೆ, ಹಾಗಾಗಿ ಅವುಗಳು ‘ನೇತ್ಯಾತ್ಮಕ ಪರಿಣಾಮ’ಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಸಮಿತಿ ಹೇಳಿದೆ.

ಬಿಟ್‌ಕಾಯಿನ್ ಮುಂತಾದ ಇಂಟರ್‌ನೆಟ್ ಮೂಲಕ ವ್ಯವಹರಿಸಲ್ಪಡುವ ಅಮೂರ್ತ ಅಥವಾ ಕ್ರಿಪ್ಟೊಕರೆನ್ಸಿಗಳಿಗೆ ಸೌದಿ ಅರೇಬಿಯದಲ್ಲಿ ಮಾನ್ಯತೆಯಿಲ್ಲ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News