ಮಕ್ಕಾ: ಕಅಬಾಕ್ಕೆ ನೂತನ ‘ಕಿಸ್ವಾ’ ಸಮರ್ಪಣೆ

Update: 2018-08-13 17:13 GMT

ಜಿದ್ದಾ, ಆ. 13: ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ರವಿವಾರ ನೂತನ ‘ಕಿಸ್ವಾ’ವನ್ನು ಕಅಬಾದ ಹಿರಿಯ ಉಸ್ತುವಾರಿ ಸಾಲಿಹ್ ಬಿನ್ ಝೈನುಲ್ ಅಬೀದಿನ್ ಅಲ್ ಶೈಬಿಗೆ ಹಸ್ತಾಂತರಿಸಿದರು.

ಮಕ್ಕಾ ಉಪ ಗವರ್ನರ್ ರಾಜಕುಮಾರ ಅಬ್ದುಲ್ಲಾ ಬಿನ್ ಬಾಂದರ್ ಬಿನ್ ಅಬ್ದುಲ್ ಅಝೀಝ್ ಮತ್ತು ಎರಡು ಪವಿತ್ರ ಮಸೀದಿಗಳ ಸಮಿತಿಯ ಮುಖ್ಯಸ್ಥ ಶೇಖ್ ಅಬ್ದುಲ್‌ರಹಮಾನ್ ಅಲ್ ಸುದೈಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಿಸ್ವಾ ಐದು ಭಾಗಗಳನ್ನು ಹೊಂದಿದೆ. ನಾಲ್ಕು ಭಾಗಗಳು ಕಅಬಾದ ನಾಲ್ಕು ಬದಿಗಳನ್ನು ಮುಚ್ಚುತ್ತವೆ ಹಾಗೂ ಐದನೆ ಭಾಗವನ್ನು ಕಅಬಾ ಬಾಗಿಲ ಮೇಲೆ ಪರದೆಯಂತೆ ನೇತಾಡಿಸಲಾಗುತ್ತದೆ.

ಕಿಸ್ವಾ ತಯಾರಿಕೆಗೆ ಭಾರೀ ಪ್ರಮಾಣದ ಅಮೂಲ್ಯ ಲೋಹಗಳು ಹಾಗೂ ಶುದ್ಧ ರೇಶ್ಮೆ ಬೇಕಾಗುತ್ತದೆ. ಇದರ ತಯಾರಿಕೆಯಲ್ಲಿ ಸುಮಾರು 170 ಶಿಲ್ಪಿಗಳು ಪಾಲ್ಗೊಂಡಿದ್ದಾರೆ.

ಸಾಮಾನ್ಯವಾಗಿ ಕಿಸ್ವಾವನ್ನು ‘ಅರಫಾ’ ದಿನದಂದು ಕಅಬಾದಲ್ಲಿ ಇಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News