ಶಾರ್ಜಾ: ತುಂಬೆ ಕುಟುಂಬದಿಂದ ನಿರ್ಮಿತ ಎರಡನೇ ಜುಮಾ ಮಸೀದಿ ಲೋಕಾರ್ಪಣೆ

Update: 2018-08-13 17:46 GMT

ಶಾರ್ಜಾ, ಆ.13: ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮತ್ತು ಅವರ ಕುಟುಂಬವು ಶಾರ್ಜಾದ ಶಾರ್ಕಾನ್ ಪ್ರದೇಶದ ಅಲ್ ಮಕ್ದಿಸಿ ಸ್ಟ್ರೀಟ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಜುಮಾ ಮಸೀದಿಯು ಆ.13ರಂದು ಲೋಕಾರ್ಪಣೆಗೊಂಡಿತು.

ಅಂಜಾದ್ ಪೊಲೀಸ್ ಠಾಣೆಯ ಎದುರಿನಲ್ಲಿರುವ ನೂತನ ಮಸೀದಿಯಲ್ಲಿ ಪ್ರತಿದಿನದ ಐದು ಹೊತ್ತಿನ ನಮಾಝ್‌ಗಳು, ಶುಕ್ರವಾರದ ಮತ್ತು ರಮಝಾನ್ ನಮಾಝ್‌ಗಳನ್ನು ನಿರ್ವಹಿಸಲು ಅನುಕೂಲವಿದ್ದು, ಸ್ಟ್ರೀಟ್ 59ರಿಂದ ಸುಲಭವಾಗಿ ತಲುಪಬಹುದು.

ಇಲ್ಲಿ ಸುಮಾರು 200 ಜನರು ನಮಾಝ್ ನಿರ್ವಹಿಸಬಹುದಾಗಿದ್ದು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರಾರ್ಥನಾ ಹಾಲ್‌ಗಳು ಮತ್ತು ಪ್ರವೇಶಗಳನ್ನು ಹೊಂದಿದೆ. ಈ ಮಸೀದಿಯ ವಿಶೇಷವೆಂದರೆ ಶುಕ್ರವಾರದ ಖುತ್ಬಾ ಅನ್ನು ಇಂಗ್ಲೀಷ್‌ನಲ್ಲಿ ನೀಡಲಾಗುತ್ತದೆ.

ಇದು ಯುಎಇಯಲ್ಲಿ ಡಾ. ತುಂಬೆ ಮೊಯ್ದೀನ್ ಮತ್ತು ಅವರ ಕುಟುಂಬವು ನಿರ್ಮಿಸಿರುವ ಎರಡನೇ ಮಸೀದಿಯಾಗಿದೆ. ಅಜ್ಮಾನ್‌ನ ಅಲ್ ಜರ್ಫ್‌ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿರುವ ತುಂಬೆ ಮೊಯ್ದೀನ್ ಮಸೀದಿಯು ಮೊದಲ ಮಸೀದಿಯಾಗಿದ್ದು, 400 ಜನರು ನಮಾಝ್ ನಿರ್ವಹಿಸಬಹುದಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿವೆ. ಇಲ್ಲಿ ಇಂಗ್ಲೀಷ್‌ನಲ್ಲಿ ಖುತ್ಬಾ ನೀಡಲಾಗುತ್ತದೆ.

ಡಾ. ತುಂಬೆ ಮೊಯ್ದೀನ್ ಅವರು ಮಂಗಳೂರಿನ ಖ್ಯಾತ ಉದ್ಯಮಿ, ಹಿರಿಯ ಸಮಾಜಿಕ-ಧಾರ್ಮಿಕ ಧುರೀಣ, ಬಿ.ಎ. ಗ್ರೂಪ್ ನ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಸುಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News