ಸೌದಿ: ಧಾರ್ಮಿಕ ಭಾಷಣದ ಮೇಲೆ ನಿಗಾ ಇಡಲು ಆ್ಯಪ್

Update: 2018-08-14 17:18 GMT

ರಿಯಾದ್, ಆ. 14: ಮಸೀದಿಗಳಲ್ಲಿ ಮಾಡಲಾಗುವ ಧಾರ್ಮಿಕ ಭಾಷಣಗಳು ಮತ್ತು ಪ್ರಾರ್ಥನೆಗಳ ಮೇಲೆ ನಿಗಾ ಇಡಲು ಸೌದಿ ಅರೇಬಿಯದ ಅಧಿಕಾರಿಗಳು ಮೊಬೈಲ್ ಫೋನ್ ಆ್ಯಪೊಂದನ್ನು ಸಿದ್ಧಪಡಿಸುತ್ತಿದ್ದಾರೆ.

 ಭಾಷಣದ ಸ್ವರೂಪ ಮತ್ತು ಅವಧಿಯನ್ನು ತಿಳಿಯಲು ಈ ಆ್ಯಪ್‌ನಿಂದ ಸಾಧ್ಯವಾಗುತ್ತದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲತೀಫ್ ಅಲ್-ಅಶೇಖ್ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ಆ್ಯಪ್‌ನ್ನು ಬಿಡುಗಡೆ ಮಾಡಲು ಸಚಿವಾಲಯ ಉದ್ದೇಶಿಸಿದೆ.

ವಿದೇಶಿ ಏಕಪಕ್ಷೀಯ ಚಿಂತನೆಗಳಿಂದ ಜನರನ್ನು ದೂರವಿಡುವ ಪ್ರಯತ್ನವಾಗಿ ಸೌದಿ ಅರೇಬಿಯ ಈಗ ಧಾರ್ಮಿಕ ಭಾಷಣಗಳ ಮೇಲೆ ನಿಗಾ ಇಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News