ಒಮನ್: ಭಾರತೀಯ ತೈಲ ಹಡಗಿನಲ್ಲಿ ಸ್ಫೋಟ: 3 ನಾವಿಕರು ನಾಪತ್ತೆ

Update: 2018-08-15 17:08 GMT

ದುಬೈ, ಆ. 15: ಒಮನ್ ಕರಾವಳಿಯಲ್ಲಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ತನ್ನ ತೈಲ ಹಡಗೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ಶಿಪ್ಪಿಂಗ್ ಕಂಪೆನಿ ‘ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ’ ಹೇಳಿದೆ.

ಒಮನ್ ಕೊಲ್ಲಿಯಲ್ಲಿ ತನ್ನ ತೈಲ ಹಡಗು ‘ಎಂಟಿ ದೇಶ್ ವೈಭವ್’ನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದೆ ಎಂದು ಕಂಪೆನಿ ತಿಳಿಸಿದೆ. ತೈಲ ಹಡಗು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೂರ್ವ ಕರಾವಳಿಯಲ್ಲಿರುವ ಫುಜೈರಾದತ್ತ ಸಾಗುತ್ತಿತ್ತು.

ಸ್ಫೋಟದಲ್ಲಿ ಓರ್ವ ನಾವಿಕನಿಗೆ ಸುಟ್ಟ ಗಾಯವಾಗಿದ್ದು ಅವರನ್ನು ಹೆಲಿಕಾಪ್ಟರ್‌ನಲ್ಲಿ ಸ್ಥಳಾಂತರಿಸಲಾಗಿದೆ.

ಬೆಂಕಿ ನಂದಿಸಲು ಒಮನ್ ನೌಕಾ ಪಡೆ ಮತ್ತು ಇತರ ಹಡಗುಗಳು ನೆರವು ನೀಡಿವೆ ಎಂದು ಶಿಪ್ಪಿಂಗ್ ಕಂಪೆನಿ ತಿಳಿಸಿದೆ.

‘‘ಬೆಂಕಿಯನ್ನು ನಂದಿಸಲಾಗಿದೆ ಹಾಗೂ ಹಡಗು ಈಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಹಾಗೂ ಚಾಲನೆಗೆ ಸಿದ್ಧವಾಗಿದೆ’’ ಎಂದು ಕಂಪೆನಿಯ ಇನ್ನೊಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News