ಕೆಸಿಎಫ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ

Update: 2018-08-15 17:17 GMT

ರಿಯಾದ್, ಆ. 15: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ವತಿಯಿಂದ ಭಾರತದ 72ನೇ ಸ್ವಾತಂತ್ರ್ಯೋತ್ಸವ'ವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ  ಧ್ವಜಾರೋಹಣ ನೆರವೇರಿಸಿದರು. ರಿಯಾದ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಫಾರೂಕ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಉದ್ಘಾಟಿಸಿ, ನಂತರ ಮಾತನಾಡಿದರು.

ವೇದಿಕೆಯಲ್ಲಿ ಶರೀಫ್ ಅಮಾನಿ, ಉಸ್ಮಾನ್ ಪರಪ್ಪು, ಉಪಸ್ಥಿತರಿದ್ದರು. ಅಶ್ರಫ್ ಮದನಿ ಸ್ವಾಗತಿಸಿ, ಅಶ್ರಫ್ ಕೆಎಮ್ಮೆಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News