ಸೌದಿ: ಈದುಲ್ ಅಝ್‌ಹಾ ಪ್ರಾರ್ಥನೆಗಾಗಿ 469 ಮಸೀದಿಗಳು ಸಿದ್ಧ

Update: 2018-08-18 15:18 GMT

ಜಿದ್ದಾ, ಆ. 18: ಈದುಲ್ ಅಝ್‌ಹಾ ಪ್ರಾರ್ಥನೆಗಾಗಿ 469 ಮಸೀದಿಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಸೌದಿ ಅರೇಬಿಯದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮದೀನಾ ಹಾಗೂ ಇತರ ಕಡೆಗಳಲ್ಲಿ 469 ಮಸೀದಿಗಳು ಮತ್ತು ಪ್ರಾರ್ಥನಾ ಸ್ಥಳಗಳನ್ನು ಈದುಲ್ ಅಝ್‌ಹಾ ಪ್ರಾರ್ಥನೆಗಾಗಿ ಸಿದ್ಧಪಡಿಸಲಾಗಿದೆ ಎಂದು ಮದೀನಾದಲ್ಲಿರುವ ಸಚಿವಾಲಯದ ಮಹಾನಿರ್ದೇಶಕ ಶೇಖ್ ಫಾಹದ್ ಬಿನ್ ಸುಲೈಮಾನ್ ಅಲ್-ತುವೈಜ್ರಿ ಹೇಳಿದರು.

ಈದುಲ್ ಅಝ್‌ಹಾ ಪ್ರಾರ್ಥನೆಯು ಬೆಳಗ್ಗೆ 6:13ಕ್ಕೆ ನಡೆಯುವುದು ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಒಳಗೆ ಬಾಕ್ಸ್

ಹಜ್ ವರದಿ ಮಾಡಲು 800 ಮಾಧ್ಯಮ ಪ್ರತಿನಿಧಿಗಳು

800ಕ್ಕೂ ಅಧಿಕ ವಿದೇಶಿ ಮಾಧ್ಯಮ ಪ್ರತಿನಿಧಿಗಳು ಹಜ್ ವಿಧಿವಿಧಾನಗಳ ವರದಿ ಮಾಡುತ್ತಾರೆ ಎಂದು ಸೌದಿ ಅರೇಬಿಯದ ಮಾಧ್ಯಮ ಸಚಿವ ಡಾ. ಔದ್ ಬಿನ್ ಸಾಲಿಹ್ ಅಲ್-ಔದ್ ಹೇಳಿದ್ದಾರೆ.

ಇದಕ್ಕೆ ಹೆಚ್ಚುವರಿಯಾಗಿ, 151 ಮಾಧ್ಯಮ ಸಂಸ್ಥೆಗಳು ಮತ್ತು 17 ಅಂತಾರಾಷ್ಟ್ರೀಯ ಸುದ್ದಿ ಜಾಲಗಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿದ್ದಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ಆರು ಅಧಿಕೃತ ಚಾನೆಲ್‌ಗಳು ಮತ್ತು ಇತರ 10 ಭಾಷೆಗಳ ಚಾನೆಲ್‌ಗಳು ಹಜ್ ಕುರಿತ ಸುದ್ದಿಗಳನ್ನು ಹಾಗೂ ದೈನಂದಿನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿವೆ.

ಮಕ್ಕಾ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ದೇಶ ಮತ್ತು ವಿದೇಶಗಳ ಮಾಧ್ಯಮ ಪ್ರತಿನಿಧಿಗಳಿಗೆ ನೆರವು ನೀಡಲು 7 ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News