ದುಬೈ: ಈದ್ ಸುಗಮ ಸಾರಿಗೆಗಾಗಿ ಯೋಜನೆ
Update: 2018-08-18 15:22 GMT
ದುಬೈ, ಆ. 18: ಈದುಲ್ ಅಝ್ಹಾ ರಜೆಯ ಅವಧಿಯಲ್ಲಿ ಸುಗಮ ಸಂಚಾರ ಹಾಗು ರಸ್ತೆ ಸುರಕ್ಷತೆಯನ್ನು ಖಾತರಿಪಡಿಸಲು ದುಬೈ ಪೊಲೀಸರು ಮತ್ತು ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ (ಆರ್ಟಿಎ) ಯೋಜನೆಯೊಂದನ್ನು ರೂಪಿಸಿದೆ.
‘‘ನಾವು ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ ಹಾಗೂ ಈದುಲ್ ಅಝ್ಹಾ ರಜೆಯನ್ನು ನಿಭಾಯಿಸಲು ಸನ್ನದ್ಧರಾಗಿದ್ದೇವೆ’’ ಎಂದು ಭದ್ರತಾ ಇಲಾಖೆಯ ಉಸ್ತುವಾರಿ ನಿರ್ದೇಶಕ ಬ್ರಿಗೇಡಿಯರ್ ಎಕ್ಸ್ಪರ್ಟ್ ಖಲೀಲ್ ಉಬೈದ್ ಅಲ್ ಬಿಶ್ರಿ ತಿಳಿಸಿದರು.